ಎಂಎಸ್ ಧೋನಿಗೆ ಲವ್ ಸ್ಟೋರಿ ಚಿತ್ರ ನೋಡುವ ಆಸೆಯಾಗಿದೆಯಂತೆ; ಆ ಚಿತ್ರ ಯಾವುದು ಗೊತ್ತ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸದ್ಯ ಕ್ರಿಕೆಟ್ ನಿಂದ ವಿರಾಮ ಪಡೆದಿದ್ದು ಮೋಜು ಮಸ್ತಿ ಮೂಡ್ ನಲ್ಲಿದ್ದಾರೆ...
ಆಯೂಶ್-ವರಿನಾ-ಎಂಎಸ್ ಧೋನಿ
ಆಯೂಶ್-ವರಿನಾ-ಎಂಎಸ್ ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸದ್ಯ ಕ್ರಿಕೆಟ್ ನಿಂದ ವಿರಾಮ ಪಡೆದಿದ್ದು ಮೋಜು ಮಸ್ತಿ ಮೂಡ್ ನಲ್ಲಿದ್ದಾರೆ. 
ಬಿಡುವಿನ ವೇಳೆಯಲ್ಲಿ ಎಂಎಸ್ ಧೋನಿ ತಮ್ಮ ನೆಚ್ಚಿನ ಶ್ವಾನಗಳ ಜೊತೆ ಕಾಲ ಕಳೆದಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. 
ಇದೀಗ ಎಂಎಸ್ ಧೋನಿಗೆ ಲವ್ ಸ್ಟೋರಿ ಚಿತ್ರವನ್ನು ನೋಡುವ ಆಸೆಯಾಗಿದೆಯಂತೆ. ಹೌದು ಧೋನಿ ಅಭಿರಾಜ್ ಮಿನವಾಲ್ ನಿರ್ದೇಶನದ ಲವ್ ರಾತ್ರಿ ಚಿತ್ರದ ಟ್ರೈಲರ್ ನೋಡಿ ಫುಲ್ ಫಿದಾ ಆಗಿದ್ದಾರೆ. 
ಚಿತ್ರದ ಪ್ರಮೋಶನ್ಸ್ ಗಾಗಿ ಕೋಲ್ಕತ್ತಾಗೆ ಚಿತ್ರದ ನಟ ಆಯೂಶ್ ಶರ್ಮಾ ಮತ್ತು ವರಿನಾ ಹುಸೇನ್ ಬಂದಿದ್ದು ಅವರನ್ನು ಧೋನಿ ಮನೆಗೆ ಊಟಕ್ಕೆ ಕರೆದು ಕೆಲ ಸಮಯ ಕಾಲ ಕಳೆದಿದ್ದಾರೆ. 
ಇನ್ನು ಚಿತ್ರದ ಟ್ರೈಲರ್ ನೋಡಿ ಖುಷಿಯಾಯಿತು. ಚಿತ್ರವನ್ನು ನೋಡುವ ಬಯಕೆಯಾಗಿದೆ ಎಂದು ಎಂಎಸ್ ಧೋನಿ ಅವರು ಹೇಳಿರುವುದಾಗಿ ಆಯೂಶ್ ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com