ಸೈಮಂಡ್ಸ್ ಕತೆ ಕಟ್ಟಿ ಜನರನ್ನು ಮಂಗನನ್ನಾಗಿ ಮಾಡ್ತಿದ್ದಾರೆ: ಹರ್ಭಜನ್ ಸಿಂಗ್

ಟೀಂ ಇಂಡಿಯಾದ ಸ್ಪಿನ್ನರ್ ಹರ್ಭಜನ್ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನನ್ನನ್ನು ಮಂಗ ಎಂದು ಕರೆದು ಅವಮಾನಿಸಿದ್ದ ತಪ್ಪಿಗೆ ಅತ್ತು ತಮ್ಮ ಕ್ಷಮೆಯಾಚಿಸಿದ್ದರು ಎಂಬ...
ಹರ್ಭಜನ್ ಸಿಂಗ್, ಆ್ಯಂಡ್ರೂ ಸೈಮಂಡ್ಸ್
ಹರ್ಭಜನ್ ಸಿಂಗ್, ಆ್ಯಂಡ್ರೂ ಸೈಮಂಡ್ಸ್
ನವದೆಹಲಿ: ಟೀಂ ಇಂಡಿಯಾದ ಸ್ಪಿನ್ನರ್ ಹರ್ಭಜನ್ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನನ್ನನ್ನು ಮಂಗ ಎಂದು ಕರೆದು ಅವಮಾನಿಸಿದ್ದ ತಪ್ಪಿಗೆ ಅತ್ತು ತಮ್ಮ ಕ್ಷಮೆಯಾಚಿಸಿದ್ದರು ಎಂಬ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸೈಮಂಡ್ಸ್ ವಾದಕ್ಕೆ ಭಜ್ಜಿ ತಿರುಗೇಟು ನೀಡಿದ್ದಾರೆ. 
ಸೈಮಂಡ್ಸ್ ಒಳ್ಳೆಯ ಕ್ರಿಕೆಟಿಗ ಎಂದು ಅಂದುಕೊಂಡಿದ್ದೆ, ಆತನಲ್ಲಿ ಒಬ್ಬ ಒಳ್ಳೆಯ ಕತೆಗಾರ ಸಹ ಇದ್ದಾನೆ. 2008ರಲ್ಲಿ ಮಂಕಿ ಗೇಟ್ ಕತೆಯನ್ನು ಮಾರಾಟ ಮಾಡಿದ್ದರು. 2018ರಲ್ಲೂ ಚೆನ್ನಾಗಿ ಮಾರಾಟ ಮಾಡುತ್ತಿದ್ದಾರೆ. ಹತ್ತು ವರ್ಷದಲ್ಲಿ ಪ್ರಪಂಚ ಬಹಳಷ್ಟು ಬೆಳೆದಿದೆ. ನೀವೂ ಬೆಳೆದು ದೊಡ್ಡವರಾಗಿ ಎಂದು ಭಜ್ಜಿ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ. ಇನ್ನು ಹರ್ಭಜನ್ ಸಿಂಗ್ ತಮ್ಮ ಬಳಿ ಅತ್ತು ಕ್ಷಮೆ ಕೇಳಿದ್ದರು ಎಂಬ ಸೈಮಂಡ್ಸ್ ವಾದವನ್ನು ಭಜ್ಜಿ ಅಲ್ಲಗೆಳೆದಿದ್ದಾರೆ. 
ಇತ್ತೀಚೆಗೆ ಕ್ರೀಡಾ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಸೈಮಂಡ್ಸ್ ಅವರು ತಮ್ಮನ್ನು ಮಂಗ ಎಂದು ಕರೆದಿದ್ದಕ್ಕೆ ಹರ್ಭಜನ್ ಸಿಂಗ್ ಅವರು ಅತ್ತು ಗೋಳಾಡಿ ಕ್ಷಮೆ ಕೇಳಿದ್ದರು ಎಂದು ಹೇಳಿದ್ದರು. 
ಸೈಮಂಡ್ಸ್ ರನ್ನು ಮಂಗ ಎಂದು ಕರೆದ ತಪ್ಪಿಗೆ ಭಜ್ಜಿಯನ್ನು ಮೂರು ಮ್ಯಾಚ್ ಗಳಿಂದ ಸಸ್ಪೆಂಡ್ ಮಾಡಲಾಗಿತ್ತು. ಬಹಳ ಕಾಲ ನಾನು ಆತನನ್ನು ಭೇಟಿಯಾಗಿರಲಿಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ಟೂರ್ನಿಯಲ್ಲಿ ನಾವು ಮತ್ತೆ ಭೇಟಿಯಾದೆವು. ಅಲ್ಲಿ ನಾನು ಭಾವೋದ್ವೇಗಕ್ಕೆ ಒಳಗಾಗಿ ಸೈಮಂಡ್ಸ್ ರನ್ನು ಕ್ಷಮಿಸಿ ಎಂದು ಅತ್ತು ಗೋಳಾಡಿದ್ದ ಎಂದು ಹೇಳಿದ್ದರು. ನಾನು ಹಾಗೇ ಮಾಡಿಲ್ಲ ಎಂದು ಭಜ್ಜಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com