ಈ ಆಟಗಾರ ಕ್ರಿಕೆಟ್ ಆಡಿರುತ್ತಿದ್ದರೆ 25 ಕೋಟಿ ರೂ. ಗೆ ಹರಾಜಾಗುತ್ತಿದ್ದರು: ಗವಾಸ್ಕರ್ ಹೇಳಿದ್ದು ಯಾರ ಬಗ್ಗೆ?

ಈ ಆಟಗಾರ ಇಂದು ಕ್ರಿಕೆಟ್ ಆಡಿರುತ್ತಿದ್ದರೆ ಖಂಡಿತಾ 25 ಕೋಟಿ ರೂಗಳಿಗೆ ಹರಾಜಾಗಿರುತ್ತಿದ್ದರು ಎಂದು ಸುನಿಲ್ ಗಾವಸ್ಕರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಈ ಆಟಗಾರ ಇಂದು ಕ್ರಿಕೆಟ್ ಆಡಿರುತ್ತಿದ್ದರೆ ಖಂಡಿತಾ 25 ಕೋಟಿ ರೂಗಳಿಗೆ ಹರಾಜಾಗಿರುತ್ತಿದ್ದರು ಎಂದು ಸುನಿಲ್ ಗಾವಸ್ಕರ್ ಹೇಳಿದ್ದಾರೆ.
ಬಹು ನಿರೀಕ್ಷಿತ ಐಪಿಎಲ್ 2019 ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು, ಇತ್ತೀಚೆಗಷ್ಟೇ ಐಪಿಎಲ್ ಹರಾಜು ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಈ ಹೊತ್ತಿನಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಭಾರತೀಯ ಕ್ರಿಕೆಟ್ ನ ದಂತಕಥೆ ಸುನಿಲ್ ಗವಾಸ್ಕರ್ ಅವರು ತಮ್ಮ ಮತ್ತೋರ್ವ ಸಹ ಆಟಗಾರನನ್ನು ಹಾಡಿ ಹೊಗಳಿದ್ದಾರೆ. 
ಕಪಿಲ್​ದೇವ್​ ವಿಶ್ವಕ್ರಿಕೆಟ್​ ಕಂಡ ಶ್ರೇಷ್ಠ ಆಲ್​ರೌಂಡರ್​. ಅವರೇನಾದರೂ ಇಂದು ಆಡುತ್ತಿದ್ದರೆ ಐಪಿಎಲ್​ನಲ್ಲಿ 25 ಕೋಟಿಗೆ ಮಾರಾಟವಾಗುತ್ತಿದ್ದರು ಎಂದು ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸುನಿಲ್​ ಗವಾಸ್ಕರ್​ ಅಭಿಪ್ರಾಯ ಪಟ್ಟಿದ್ದಾರೆ.
ಖಾಸಗಿ ಚಾನಲ್ ನ ಕಾರ್ಯಕ್ರಮದಲ್ಲಿ ಕಪಿಲ್​ ದೇವ್​ ಹಾಗೂ ಸುನಿಲ್​ ಗವಾಸ್ಕರ್​ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಪಿಲ್​ ಅವರ 1983 ವಿಶ್ವಕಪ್​ ಕೆಲವು ಸನ್ನಿವೇಶಗಳನ್ನು ನೆನೆಪಿಸಿಕೊಂಡ ಗವಾಸ್ಕರ್​, ಜಿಂಬಾಬ್ವೆ ವಿರುದ್ಧ ಕಪಿಲ್​ ಅವರ 175 ರನ್ ಗಳ ಏಕಾಂಗಿ ಹೋರಾಟ ಸ್ಮರಿಸಿಕೊಂಡರು.  1983ರ ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಕೇವಲ 13 ರನ್ ಗಳಿಗೆ 5 ವಿಕೆಟ್​ ಕಳೆದುಕೊಂಡಿತ್ತು. ಈ ಹಂತದಲ್ಲಿ ಬ್ಯಾಟಿಂಗ್​ ಗೆ ಇಳಿದಿದ್ದ ನಾಯಕ ಕಪಿಲ್​ ದೇವ್ ಅಜೇಯ 175 ರನ್‌ ಬಾರಿಸಿದ್ದರು.  ಅವರ ಆ ಅದ್ಭುತ ಇನಿಂಗ್ಸ್​ ಇರದಿದ್ದರೆ ನಾವು 80 ರನ್​ ಕೂಡ ದಾಟಲಾಗುತ್ತಿರಲಿಲ್ಲ ಎಂದು ಗವಾಸ್ಕರ್​ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಈಗ ಕ್ರಿಕೆಟ್​ ಆಡುವಂತಿದ್ದರೆ ಅವರೇ ಜಗತ್ತಿನ ಬೆಲೆಬಾಳುವ ಕ್ರಿಕೆಟರ್​ ಆಗಿರುತ್ತಿದ್ದು,  25 ಕೋಟಿಗೆ ಮಾರಾಟವಾಗುತ್ತಿದ್ದರು. ಇಂದು ಕೂಡಾ 7 ರಿಂದ 8 ಕೋಟಿಗೆ ಖರೀದಿಸಬಹುದು ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಇವರ ಮಾತು ಕೇಳಿದ ನಂತರ ಮಾತನಾಡಿದ ಕಪಿಲ್​ ಆಗೇನಾದರು 25 ಕೋಟಿಗೆ ಮಾರಾಟವಾದರೆ ಸನ್ನಿಗೆ 10-15 ಕೋಟಿ ಕೊಡುತ್ತಿದ್ದೆ ಎಂದಿದ್ದಾರೆ. ಈ ಮಾತು ಕೇಳಿ ನೆರೆದಿದ್ದ ವೀಕ್ಷಕ ವರ್ಗ ನಗೆಗಡಲಲ್ಲಿ ತೇಲಾಡಿತು.ಕಪಿಲ್​ ದೇವ್​ ಅವರು ಆ ಒಂದು ಇನಿಂಗ್ಸ್​ ಇಂದಿಗೂ ಏಕದಿನ ಕ್ರಿಕೆಟ್​ನ ಅತ್ಯುತ್ತಮ ಇನಿಂಗ್ಸ್​ ಆಗಿ ಉಳಿದಿದೆ. ಕಪಿಲ್​ ದೇವ್​ 138 ಎಸೆತಗಳಲ್ಲಿ 175 ರನ್ ಗಳಿಸಿದ್ದರು. ಇದರಲ್ಲಿ 16 ಬೌಂಡರಿ, 6 ಸಿಕ್ಸರ್​ ಸೇರಿತ್ತು. ಈ ಪಂದ್ಯದಲ್ಲಿ ಭಾರತ 31 ರನ್​ಗಳ ಜಯ ಸಾಧಿಸಿತು. ವಿಶ್ವಕಪ್​ ಕೂಡ ಎತ್ತಿ ಹಿಡಿದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com