2018,ರವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ದೀರ್ಘಾವಧಿಯ ಬೌಲಿಂಗ್ಬಳಿಕ ಆಲ್-ರೌಂಡರ್ ರವೀಂದ್ರ ಜಡೇಜಾ ಎಡ ಭುಜದ ನೋವಿನಿಂದ ಬಳಲಿದ್ದರು.ನವೆಂಬರ್ 2 ರಂದು ಮುಂಬೈಯಲ್ಲಿ ಈ ಸಂಬಂಧ ಅವರು ಚಿಕಿತ್ಸೆ ಪಡೆದಿದ್ದರು ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ ಈ ಚಿಕಿತ್ಸೆ ಬಳಿಕ ಜಡೇಜಾ ಉತ್ತಮವಾಗಿ ಚೇತರಿಸಿಕೊಂಡಿದ್ದು 12 ರಿಂದ 15 ನವೆಂಬರ್ ವರೆಗೆ ನಡೆದ ಸೌರಾಷ್ಟ್ರದ ರಣಜಿ ಟ್ರೋಫಿಯಲ್ಲಿ ಅವರು 64 ಓವರ್ ಗಳನ್ನು ಪೂರ್ಣಗೊಳಿಸಿದ್ದರು.ಈಗ ಅವರು ಯಾವುದೇ ಸಮಸ್ಯೆ ಇಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಗಮಿಸಲಿದ್ದಾರೆ.