ಭಾರತೀಯ ಬೌಲರ್ ಗಳ ದಾಳಿಗೆ ಕಾಂಗರೂ ಕಂಗಾಲು, ಆಸ್ಟ್ರೇಲಿಯಾದ 6 ವಿಕೆಟ್ ಪತನ

ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಿಗಿ ಹಿಡಿತ ಸಾಧಿಸಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆರು ವಿಕೆಟ್ ಗಳು ಪತನವಾಗಿದೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ
ವಿಕೆಟ್ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಿಗಿ ಹಿಡಿತ ಸಾಧಿಸಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆರು ವಿಕೆಟ್ ಗಳು ಪತನವಾಗಿದೆ.
ನಿನ್ನೆ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ಭಾರತೀಯ ಬೌಲರ್ ಗಳ ದಾಳಿಗೆ ಅಕ್ಷರಶಃ ನಲುಗಿ ಹೋಯಿತು. ತಂಡದ ಮೊತ್ತ ಕೇವಲ 24 ರನ್ ಗಳಾಗಿದ್ದಾಗಲೇ ಇಶಾಂತ್ ಶರ್ಮಾ ಮೊದಲ ಆಘಾತ ನೀಡಿದರು. ಕೇವಲ 8 ರನ್ ಗಳಿಸಿದ್ದ ಫಿಂಚ್ ಮಯಾಂಕ್ ಅಗರ್ವಾಲ್ ಗೆ ಕ್ಯಾಚಿತ್ತು ಹೊರ ನಡೆದರು. ಆ ಬಳಿಕ ಮತ್ತೋರ್ವ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ರನ್ನು ಬುಮ್ರಾ ಪೆವಿಲೆಯನ್ ಗೆ ಅಟ್ಟಿದರು. 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಉಸ್ಮಾನ್ ಖವಾಜರನ್ನು ರವೀಂದ್ರ ಜಡೇಜಾ ಔಟ್ ಮಾಡಿದರೆ, ಶಾನ್ ಮಾರ್ಶ್ ರನ್ನು ಬುಮ್ರಾ ಎಲ್ ಬಿ ಬಲೆಗೆ ಕೆಡವಿದರು.
ಬಳಿಕ ಬಂದ ಟ್ರಾವಿಸ್ ಹೆಡ್ 20 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು.  9 ರನ್ ಗಳಿಸಿದ್ದ ಮಿಚೆಲ್ ಮಾರ್ಶ್ ಜಡೇಜಾ ಬೌಲಿಂಗ್ ನಲ್ಲಿ ಔಟ್ ಆದರು. ಇನ್ನು ಭಾರತದ ಪರ ಜಸ್ ಪ್ರೀತ್ ಬುಮ್ರಾ 3, ಜಡೇಜಾ 2 ಮತ್ತು ಇಶಾಂತ್ ಶರ್ಮಾ 1 ವಿಕೆಟ್ ಪಡೆದು ಆಸಿಸ್ ಪತನಕ್ಕೆ ಕಾರಣರಾದರು. 
ಇತ್ತೀಚಿನ ವರದಿಗಳು ಬಂದಾಗ 6  ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ ತಂಡ 129 ರನ್ ಗಳಿಸಿದ್ದು, 19 ರನ್ ಗಳಿಸಿರುವ ನಾಯಕ ಟಿಮ್ ಪೈನೆ ಹಾಗೂ 9 ರನ್ ಗಳಿಸಿರುವ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಸಿಸ್ ಪಡೆ ಇನ್ನೂ 314 ರನ್ ಗಳ ಹಿನ್ನಡೆಯಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com