108/8ಕ್ಕೆ ಭಾರತ 2ನೇ ಇನ್ನಿಂಗ್ಸ್ ಡಿಕ್ಲೇರ್, ಆಸೀಸ್ ಗೆ 399 ರನ್ ಟಾರ್ಗೆಟ್, ಸೋಲಿನ ಭೀತಿಯಲ್ಲಿ ಕಾಂಗರೂಗಳು

ಆಸ್ಚ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ನಷ್ಟಕ್ಕೆ 108 ರನ್ ಗಳಿ ತನ್ನ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಮೊದಲ ಇನ್ನಿಂಗ್ಸ್ ನ 292 ರನ್ ಗಳ ಮುನ್ನಡೆಯೂ ಸೇರಿದಂತೆ ಆಸ್ಟ್ರೇಲಿಯಾಗೆ ಗೆಲ್ಲಲು 399 ರನ್ ಗಳ ಗುರಿ ನೀಡಿದೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಶಮಿ
ವಿಕೆಟ್ ಪಡೆದ ಸಂಭ್ರಮದಲ್ಲಿ ಶಮಿ
ಮೆಲ್ಬೋರ್ನ್: ಆಸ್ಚ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ನಷ್ಟಕ್ಕೆ 108 ರನ್ ಗಳಿ ತನ್ನ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಮೊದಲ ಇನ್ನಿಂಗ್ಸ್ ನ 292 ರನ್ ಗಳ ಮುನ್ನಡೆಯೂ ಸೇರಿದಂತೆ ಆಸ್ಟ್ರೇಲಿಯಾಗೆ ಗೆಲ್ಲಲು 399 ರನ್ ಗಳ ಗುರಿ ನೀಡಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಭಾರತ ತಂಡ 2ನೇ ಇನ್ನಿಂಗ್ಸ್ ನಲ್ಲಿ ಕಳಪೆ ನಿರ್ವಹಣೆ ತೋರಿತು. ಪರಿಣಾಮ ಭಾರತ ತಂಡ ಕೇವಲ 108 ರನ್ ಗಳಿಗೆ  ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ (42 ರನ್) ಮತ್ತು ರಿಷಬ್ ಪಂತ್ (33 ರನ್) ಈ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ನಾಯಕ ಕೊಹ್ಲಿಯೂ ಸೇರಿದಂತೆ ಮತ್ತಾವ ಆಟಗಾರರಿನಿಂದಲೂ ಹೇಳಿಕೊಳ್ಳುವಂತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ.
ಪರಿಣಾಮ ಭಾರತ ತಂಡ 8 ವಿಕೆಟ್ ಕಳೆದುಕೊಂಡು ಕೇವಲ 108 ರನ್ ಗಳಿಗೆ ತನ್ನ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಅಂತೆಯೇ ಆಸ್ಟ್ರೇಲಿಯಾಗೆ 399 ರನ್ ಗಳ ಸವಾಲಿನ ಗುರಿ ನೀಡಿದೆ.
ಕಾಂಗರೂಗಳಿಗೂ ಆರಂಭಿಕ ಆಘಾತ, ಸೋಲಿನ ಸುಳಿಯಲ್ಲಿ ಪೈನೆ ಪಡೆ
ಇನ್ನು ಈ ಗುರಿಯನ್ನು ಬೆನ್ನು ಹತ್ತಿರುವ ಕಾಂಗರೂಗಳೂ ಕೂಡ ಆರಂಭಿಕ ಆಘಾತ ಅನುಭವಿಸಿದ್ದು, ಆರಂಭಿಕರಾದ ಮಾರ್ಕಸ್ ಹ್ಯಾರಿಸ್ (13 ರನ್), ಆ್ಯರಾನ್ ಫಿಂಚ್ (3 ರನ್) ಅವರ ವಿಕೆಟ್ ಕಳೆದುಕೊಂಡಿದೆ. ಅಂತೆಯೇ ಮಧ್ಯಮ ಕ್ರಮಾಂಕದಲ್ಲಿ 33 ರನ್ ಗಳಿಸುವ ಮೂಲಕ ಆಸಿಸ್ ಬ್ಯಾಟಿಂಗ್ ಗೆ ಬೆನ್ನೆಲುಬಾಗಿದ್ದ ಉಸ್ಮಾನ್ ಖವಾಜ ಕೂಡ ಶಮಿ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದಿದ್ದು, ಆಸ್ಟ್ರೇಲಿಯಾ ತಂಡ ಸೋಲಿನ ಭೀತಿ ಎದುರಿಸುತ್ತಿದೆ.
ಇನ್ನು ಭಾರತದ ಪರ ಜಸ್ ಪ್ರೀತ್ ಬುಮ್ರಾ, ಮಹಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ ತಂಡ 3 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ. 25 ರನ್ ಗಳಿಸಿರುವ ಶಾನ್ ಮಾರ್ಶ್ ಹಾಗೂ 11 ರನ್ ಗಳಿಸಿರುವ ಟ್ರಾವಿಸ್ ಹೆಡ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com