ಜಸ್ ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ: ಕ್ರಿಕೆಟ್ ರಂಗದ ಹಳೆಯ ದಾಖಲೆಗಳು ಉಡೀಸ್

ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದ ಬೆನ್ನಲ್ಲೇ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ತೋರಿದ ಜಸ್ ಪ್ರೀತ್ ಬುಮ್ರಾ ಹಳೆಯ ದಾಖಲೆಹಗಳನ್ನು ಉಡೀಸ್ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದ ಬೆನ್ನಲ್ಲೇ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ತೋರಿದ ಜಸ್ ಪ್ರೀತ್ ಬುಮ್ರಾ ಹಳೆಯ ದಾಖಲೆಹಗಳನ್ನು ಉಡೀಸ್ ಮಾಡಿದ್ದಾರೆ.
ಹೌದು ಬುಮ್ರಾ ಆಸಿಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದಿದ್ದರು. ಬುಮ್ರಾ ಬೌಲಿಂಗ್ ದಾಳಿ ಗೆ ತತ್ತರಿಸಿದ ಆಸಿಸ್  ಪಡೆ ಕೇವಲ 151 ರನ್ ಗಳಿಗೆ ಆಲೌಟ್ ಆಗಿತ್ತು. ಅದರ ಪರಿಣಾಮವಾಗಿಯೇ ಭಾರತ 292 ರನ್ ಗಳ ಬೃಹತ್ ಮುನ್ನಡೆ ಪಡೆದುಕೊಂಡಿತ್ತು. ಅಂತೆಯೇ ಎರಡನೇ ಇನ್ನಿಂಗ್ಸ್ ನಲ್ಲಿ ತಮ್ಮ ಪ್ರಭಾವಿ ದಾಳಿ ಮುಂದುವರೆಸಿದ ಬುಮ್ರಾ, ಮೂರು ವಿಕೆಟ್ ಪಡೆದು ಮತ್ತೆ ಆಸ್ಟ್ರೇಲಿಯಾಗೆ ಕಂಟಕವಾದರು. ಅಲ್ಲದೆ ಆಸ್ಟ್ರೇಲಿಯಾಗೆ ಆಪದ್ಭಾಂಧವರಾಗಿದ್ದ ಪ್ಯಾಟ್ ಕಮಿನ್ಸ್ ರನ್ನು ಇಂದು ಔಟ್ ಮಾಡಿ ಭಾರತದ ಗೆಲುವು ದಕ್ಕಿಸಿಕೊಟ್ಟರು.
ಇನ್ನು ಈ ಅದ್ಭುತ ಪ್ರದರ್ಶನದ ಮೂಲಕ ಬುಮ್ರಾ 39 ವರ್ಷಗಳಷ್ಟು ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. 1985ರಲ್ಲಿ ರವಿಶಾಸ್ತ್ರಿ ಇದೇ ಎಂಸಿಜಿ ಕ್ರೀಡಾಂಗಣದಲ್ಲಿ ಎರಡೂ ಇನ್ನಿಂಗ್ಸ್ ಗಳಿಂದ 179 ರನ್ ನೀಡಿ  ವಿಕೆಟ್ ಗಳಿಸಿದ್ದರು, ಇದೀಗ ಈ ದಾಖಲೆಯನ್ನು ಬುಮ್ರಾ ಹಿಂದಿಕ್ಕಿದ್ದು, ಕೇವಲ 51 ರನ್ ನೀಡಿ ಬುಮ್ರಾ  8 ವಿಕೆಟ್ ಕಬಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮತ್ತೋರ್ವ ಭಾರತೀಯ ಬೌಲಿಂಗ್ ಲೆಜೆಂಡ್ ಬಿಎಸ್ ಚಂದ್ರಶೇಖರ್ ಅವರ ಹೆಸರಿದ್ದು, 1977ರಲ್ಲಿ ಚಂದ್ರಶೇಖರ್ ಅವರು104 ರನ್ ಗಳಿಗೆ 12 ವಿಕೆಟ್ ಕಬಳಿಸಿದ್ದರು. (6/52 ಮೊದಲ ಇನ್ನಿಂಗ್ಸ್ ಮತ್ತು 6/52 ಎರಡನೇ ಇನ್ನಿಂಗ್ಸ್) ಇದು ಎಂಸಿಜಿ ಕ್ರೀಡಾಂಗಣದಲ್ಲಿ ಭಾರತೀಯ ಬೌಲರ್ ವೊಬ್ಬರ ಶ್ರೇಷ್ಠ ನಿರ್ವಹಣೆಯಾಗಿದೆ.
39 ವರ್ಷಗಳ ದಾಖಲೆ ಪತನ
ಇನ್ನು ನಿನ್ನೆಯ ಪಂದ್ಯದಲ್ಲಿ 6 ವಿಕೆಟ್ ಗಳಿಸಿದ ಬುಮ್ರಾ ವೃತ್ತಿ ಜೀವನದ ಉತ್ತಮ ಪ್ರದರ್ಶನ ನೀಡಿದ್ದರು. ಈ ಮೂಲಕ ಆಸೀಸ್, ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧ ಕ್ಯಾಲೆಂಡರ್ ವರ್ಷ ಒಂದರಲ್ಲಿ 5 ವಿಕೆಟ್ ಪಡೆದ ಮೊದಲ ಏಷ್ಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ 2018 ರಲ್ಲಿ ಟೀಂ ಇಂಡಿಯಾ ಪರ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಶಮಿ ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‍ಗೆ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ. 2018 ವರ್ಷದಲ್ಲಿ ಬುಮ್ರಾ 45 ವಿಕೆಟ್ ಪಡೆದಿದ್ದಾರೆ. 1979 ರಲ್ಲಿ ದಿಲೀಪ್ ದೋಷಿ ಪಾದಾರ್ಪಣೆ ಮಾಡಿದ ವರ್ಷದಲ್ಲಿ 40 ವಿಕೆಟ್ ಪಡೆದಿದ್ದರು.
ಪದಾರ್ಪಣೆ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಭಾರತದ ಮೊದಲ ಮತ್ತು ವಿಶ್ವದ 3ನೇ ಆಟಗಾರ
ಇನ್ನು ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಗಳಿಸಿದ ಬುಮ್ರಾ, ಪದಾರ್ಪಣೆ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಬುಮ್ರಾ 3ನೇ ಪಂದ್ಯದ 9 ವಿಕೆಟ್ ಗಳೂ ಸೇರಿದಂತೆ ಬುಮ್ರಾ ಒಟ್ಟು 48 ವಿಕೆಟ್ ಪಡೆದಿದ್ದಾರೆ. ಆ ಮೂಲಕ ಪದಾರ್ಪಣೆ ವರ್ಷದಲ್ಲೇ ಗರಿಷ್ಠ ವಿಕೆಟ್ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಕೀರ್ತಿಗೆ ಭಾಜನರಾದರು. ಅಂತೆಯೇ ಪದಾರ್ಪಣೆ ವರ್ಷದಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಸಾಧನೆ ಮಾಡಿದರು.
ಇದಕ್ಕೂ ಮೊದಲು 1981ರಲ್ಲಿ ಆಸ್ಟ್ರೇಲಿಯಾದ ಟಿ ಆಲ್ಡರ್ಮ್ಯಾನ್ ತಮ್ಮ ಪದಾರ್ಪಣೆ ವರ್ಷದಲ್ಲಿ 54 ವಿಕೆಟ್ ಪಡೆದಿದ್ದರು.  ಆ ಬಳಿಕ 1988 ರಲ್ಲಿ ವೆಸ್ಟ್ ಇಂಡೀಸ್ ನ ಲೆಜೆಂಡ್ ಕರ್ಟ್ನಿ ಆ್ಯಂಬ್ರೋಸ್ ತಮ್ಮ ಪದಾರ್ಪಣೆ ವರ್ಷದಲ್ಲಿ 49 ವಿಕೆಟ್ ಪಡೆದಿದ್ದರು. ಇದೀಗ ಬುಮ್ರಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಆಸಿಸ್ ನೆಲದಲ್ಲಿ ಗರಿಷ್ಠ ಸಾಧನೆ ಗೈದ ಮೊದಲ ಭಾರತೀಯ ಆಟಗಾರ
ಇನ್ನು ಆಸ್ಟ್ರೇಲಿಯಾ ನೆಲದಲ್ಲಿ 9 ವಿಕೆಟ್ ಪಡೆಯುವ ಮೂಲಕ ಬುಮ್ರಾ ಮತ್ತೊಂದು ಸಾಧನೆ ಮಾಡಿದ್ದು, ಆಸಿಸ್ ನೆಲದಲ್ಲಿ ಭಾರತೀಯ ಬೌಲರ್ ಒಬ್ಬರು ಮಾಡಿದ ಗರಿಷ್ಠ ಶ್ರೇಷ್ಠ ಸಾಧನೆ ಇದಾಗಿದೆ. ಬುಮ್ರಾ ಈ ಪಂದ್ಯದ ಮೂಲಕ 86 ರನ್ ನೀಡಿ 9 ವಿಕೆಟ್ ಪಡೆದಿದ್ದು, ಇದು ಆಸಿಸ್ ನೆಲದಲ್ಲಿ ಭಾರತೀಯ ಬೌಲರ್ ಒಬ್ಬನ ಗರಿಷ್ಠ ಸರ್ವಶ್ರೇಷ್ಠ ಸಾಧನೆಯಾಗಿದೆ. ಇದಕ್ಕೂ ಮೊದಲು 1985ರಲ್ಲಿ ಅಡಿಲೇಡ್ ನಲ್ಲಿ ಕಪಿಲ್ ದೇವ್ 109 ರನ್ ಗೆ 8 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ 2003ರಲ್ಲಿ ಇದೇ ಅಡಿಲೇಡ್ ನಲ್ಲಿ ಅಜಿತ್ ಅಗರ್ಕರ್ 160 ರನ್ ಗಳಿಗೆ 8 ವಿಕೆಟ್ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com