ಭಾರತದ ಚಾಹಲ್, ಕುಲದೀಪ್ ಯಾದವ್ ನಮ್ಮ ನಿದ್ದೆಗೆಡಿಸಿದ್ದಾರೆ: ಜೆಪಿ ಡುಮಿನಿ

ಭಾರತ ತಂಡ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ನಮ್ಮ ಬ್ಯಾಟ್ಸಮನ್ ಗಳ ನಿದ್ದೆಗೆಡಿಸಿದ್ದು, ಮುಂದಿನ ಪಂದ್ಯದಲ್ಲಿ ಅವರನ್ನು ಎದುರಿಸಲು ಹೊಸ ದಾರಿ ಹುಡುಕಲಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಕಂದ ಆಟಗಾರ ಜೆಪಿ ಡುಮಿನಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೇಪ್ ಟೌನ್: ಭಾರತ ತಂಡ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ನಮ್ಮ ಬ್ಯಾಟ್ಸಮನ್ ಗಳ ನಿದ್ದೆಗೆಡಿಸಿದ್ದು, ಮುಂದಿನ ಪಂದ್ಯದಲ್ಲಿ ಅವರನ್ನು ಎದುರಿಸಲು ಹೊಸ ದಾರಿ ಹುಡುಕಲಾಗುತ್ತಿದೆ ಎಂದು  ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಕದ ಆಟಗಾರ ಜೆಪಿ ಡುಮಿನಿ ಹೇಳಿದ್ದಾರೆ.
ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಹೀನಾಯವಾಗಿ ಸೋತ ಬಳಿಕ ಎಚ್ಚೆತ್ತುಕೊಂಡಿರುವ ದಕ್ಷಿಣ ಆಫ್ರಿಕಾ ಭಾರತ ಪ್ರಬಲ ಸ್ಪಿನ್ ದಾಳಿಯನ್ನು ಎದುರಿಸಲು ಹೊಸ ದಾರಿಯ ಶೋಧದಲ್ಲಿದೆ. ಈ ಹಿಂದೆ ಕೇಪ್ ಟೌನ್ ನಲ್ಲಿ  ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪಡೆಯನ್ನೇ ಹೊಂದಿದ್ದರೂ ಭಾರತ ನೀಡಿದ 304 ರನ್ ಗಳ ಗುರಿಯನ್ನು ಬೆನ್ನ ಹತ್ತಲಾಗದೇ ಆಫ್ರಿಕಾ ತಂಡ ಹೀನಾಯವಾಗಿ ಸೋತಿತ್ತು, ಕೇವಲ 174 ರನ್ ಗಳಿಗೆ  ಆಲೌಟ್ ಆಗುವ ಮೂಲಕ 124 ರನ್ ಗಳ ಅಂತರದಲ್ಲಿ ಸೋಲಿಗೆ ಶರಣಾಗಿತ್ತು.
ಪ್ರಮುಖವಾದಿ ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಗಳು ಆಫ್ರಿಕನ್ ಬ್ಯಾಟ್ಸಮನ್ ಗಳ ಮೇಲೆ ಸವಾರಿಯನ್ನೇ ಮಾಡಿದ್ದರು. ಭಾರತದ ಸ್ಪಿನ್ ಅಸ್ತ್ರಕ್ಕೆ ನಿರುತ್ತರರಾಗಿದ್ದ ಆಪ್ರಿಕನ್ನರು ಪೆವಿಲಿಯನ್ ಪರೇಡ್ ನಡೆಸಿದ್ದರು. ಇದೀಗ  ಭಾರತದ ಸ್ಪಿನ್ ಅಸ್ತ್ರವನ್ನು ಎದುರಿಸಲು ದಕ್ಷಿಣ ಆಫ್ರಿಕಾ ತಂಡ ಹೊಸ ದಾರಿಯ ಶೋಧದಲ್ಲಿ ತೊಡಗಿದ್ದು, ಈ ಬಗ್ಗೆ ಸ್ವತಃ ಆಫ್ರಿಕಾ ತಂಡದ ಆಟಗಾರ ಡುಮಿನಿ ಹೇಳಿಕೆ ನೀಡಿದ್ದಾರೆ.
ಭಾರತೀಯ ಸ್ಪಿನ್ನರ್ ಗಳು ಅತ್ಯುತ್ತಮ ಲಯದಲ್ಲಿದ್ದು, ಅವರನ್ನು ಎದುರಿಸುವ ಸಲುವಾಗಿ ಹೊಸ ಮಾರ್ಗಗಳ ಶೋಧದಲ್ಲಿ ತಮ್ಮ ತಂಡ ತೊಡಗಿದೆ. ಪ್ರಮುಖವಾಗಿ ಭಾರತದ ಯಜುವೇಂದ್ರ ಚಾಹಲ್ ಮತ್ತು ಕಲುದೀಪ್ ಯಾದವ್  ಉತ್ತಮ ಫಾರ್ಮ್ ನಲ್ಲಿದ್ದಾರೆ. ಈ ಇಬ್ಬರು ಸ್ಪಿನ್ನರ್ ಗಳನ್ನು ಎದುರಿಸುವುದೇ ತಂಡದ ಮುಂದಿರುವ ದೊಡ್ಡ ಸವಾಲಾಗಿದೆ. ಈ ಇಬ್ಬರ ಬೌಲಿಂಗ್ ನಲ್ಲಿ ಸಿಂಗಲ್ ರನ್ ಕದಿಯುವುದು ಸವಾಲಾಗುತ್ತಿದ್ದು, ಇವರ ಗೂಗ್ಲಿ ಎಸೆತಗಳನ್ನು  ಎದುರಿಸಲು ನಮ್ಮ ತಂಡದಿಂದ ಸಾಧ್ಯವಾಗುತ್ತಿಲ್ಲ. ಈ ಇಬ್ಬರೂ ಬೌಲಿಂಗ್ ಗೆ ಇಳಿಯುತ್ತಿದ್ದಂತೆಯೇ ನಮ್ಮ ಯೋಜನೆಗಳೆಲ್ಲಾ ತಲೆಕೆಳಗಾಗುತ್ತಿದೆ ಎಂದು ಡುಮಿನಿ ಹೇಳಿದ್ದಾರೆ.
ಒಟ್ಟಾರೆ ಆಫ್ರಿಕಾ ನೆಲದಲ್ಲಿ ಭಾರತೀಯ ಸ್ಪಿನ್ನರ್ ಗಳು ಮಿಂಚುತ್ತಿದ್ದು, 6 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 3 ಪಂದ್ಯಗಳನ್ನು ಜಯಿಸಿದ್ದು, ಉಳಿದಿರುವ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಭಾರತ ಸರಣಿ  ಕೈವಶ ಮಾಡಿಕೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com