ಟಿ20 ತ್ರಿಕೋನ ಸರಣಿ: ಕೊಹ್ಲಿ, ಧೋನಿಗೆ ವಿಶ್ರಾಂತಿ, ಯುವ ಪಡೆ ಆಯ್ಕೆ

ಮುಂಬರುವ ಟಿ20 ತ್ರಿಕೋನ ಸರಣಿಯಿಂದ ಐವರು ಅನುಭವಿ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ವಿಶ್ರಾಂತಿ ನೀಡಿದ್ದು...
ಟೀಂ ಇಂಡಿಯಾ
ಟೀಂ ಇಂಡಿಯಾ
ನವದೆಹಲಿ: ಮುಂಬರುವ ಟಿ20 ತ್ರಿಕೋನ ಸರಣಿಯಿಂದ ಐವರು ಅನುಭವಿ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ವಿಶ್ರಾಂತಿ ನೀಡಿದ್ದು ಯುವ ಪಡೆಯನ್ನು ಆಯ್ಕೆ ಮಾಡಿದೆ. 
ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಟಿ20 ತ್ರಿಕೋನ ಸರಣಿ ನಡೆಯಲಿದೆ. ಕಿರಿಯ ಆಟಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಿಸಿಸಿಐ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂಎಸ್ ಧೋನಿ, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿದೆ. 
ಸರಣಿಯಿಂದ ಕೊಹ್ಲಿ ಹೊರಗುಳಿಯುತ್ತಿರುವುದರಿಂದ ರೋಹಿತ್ ಶರ್ಮಾ ತಂಡಕ್ಕೆ ನಾಯಕತ್ವ ವಹಿಸಲಿದ್ದು ರೋಹಿತ್ ಶರ್ಮಾ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.  
ಟಿ20 ತ್ರಿಕೋನ ಸರಣಿ ಮಾರ್ಚ್ 6ರಿಂದ ಆರಂಭಗೊಳ್ಳಲಿದೆ. ಇನ್ನು ಅದೇ ತಿಂಗಳ 18ರಂದು ಸರಣಿ ಮುಕ್ತಾಯಗೊಳ್ಳಲಿದ್ದು ಮಾರ್ಚ್ 4ರಂದು ಎಲ್ಲಾ ತಂಡಗಳು ಲಂಕಾ ನಾಡಿಗೆ ತಲುಪಲಿವೆ.
ಭಾರತ ಆಯ್ಕೆ ತಂಡ
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್(ಉಪನಾಯಕ), ಕೆಎಲ್ ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾರ್ದೂಲ್ ಠಾಕೂರ್, ಜಯದೇವ್ ಉನ್ದಕತ್, ಮೊಹಮ್ಮದ್ ಸಿರಾಜ್ ಮತ್ತು ರಿಷಬ್ ಪಂತ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com