ವಿರಾಟ್ ಕೊಹ್ಲಿಯಂತೆ ಎಂಎಸ್ ಧೋನಿ ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜ ಯಾಕಿಲ್ಲ!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಯಾಕೆ ಧರಿಸುವುದಿಲ್ಲ ಎನ್ನುವ ಅಭಿಮಾನಿಗಳ ಪ್ರಶ್ನೆಗಳಿಗೆ ಇದೀಗ...
ವಿರಾಟ್ ಕೊಹ್ಲಿ, ಎಂಎಸ್ ಧೋನಿ
ವಿರಾಟ್ ಕೊಹ್ಲಿ, ಎಂಎಸ್ ಧೋನಿ
ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಯಾಕೆ ಧರಿಸುವುದಿಲ್ಲ ಎನ್ನುವ ಅಭಿಮಾನಿಗಳ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. 
ಟೀಂ ಇಂಡಿಯಾದ ಖ್ಯಾತ ಆಟಗಾರರಾದ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಲೋಗೋ ಮೇಲೆ ಅಥವಾ ಕೆಳಗಡೆ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸುತ್ತಾರೆ. ಆದರೆ ಧೋನಿ ಮಾತ್ರ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸದೇ ಅಂಗಳಕ್ಕೆ ಇಳಿಯುತ್ತಿದ್ದರು. ಹೀಗಾಗಿ ಯಾಕೆ ಧೋನಿ ತ್ರಿವರ್ಣ ಧ್ವಜ ಇರುವ ಹೆಲ್ಮೆಟ್ ಧರಿಸಲ್ಲ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದರು. 
ಧೋವಿ ವಿಕೆಟ್ ಕೀಪಿಂಗ್ ಮಾಡುವುದರಿಂದ ಕೆಲ ಸಮಯ ಹೆಲ್ಮೆಟ್ ಅನ್ನು ಬಿಚ್ಚಿ ಮೈದಾನದ ಮೇಲೆ ಇಡಬೇಕಾಗುತ್ತದೆ. ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜ ಇದ್ದರೆ ಅದಕ್ಕೆ ಅಪಮಾನ ಮಾಡಿದ ಹಾಗೇ ಎಂಬ ಕಾರಣಕ್ಕೆ ಧೋನಿ ತ್ರಿವರ್ಣ ಧ್ವಜ ಇಲ್ಲದ ಹೆಲ್ಮೆಟ್ ಧರಿಸುತ್ತಾರೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com