ದಾಖಲೆ ಬರೆದ ಹಾರ್ದಿಕ್ ಪಾಂಡ್ಯಾ ಸಾಹಸ-ಭುವನೇಶ್ವರ್ ಕುಮಾರ್ ತಾಳ್ಮೆಯ ಆಟ

ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಹಿನ್ನಡೆ ಅನುಭವಿಸಿದ್ದರೂ, ಹಾರ್ದಿಕ್ ಪಾಂಡ್ಯಾ ಮತ್ತು ಭುವನೇಶ್ವರ್ ಕುಮಾರ್ ಅವರ ಅಮೋಘ ಜೊತೆಯಾಟ ದಾಖಲೆಯೊಂದನ್ನು ಬರೆದಿದೆ.
ಪಾಂಡ್ಯಾ-ಭುವಿ ಜೊತೆಯಾಟ
ಪಾಂಡ್ಯಾ-ಭುವಿ ಜೊತೆಯಾಟ
ಕೇಪ್ ಟೌನ್: ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಹಿನ್ನಡೆ ಅನುಭವಿಸಿದ್ದರೂ, ಹಾರ್ದಿಕ್ ಪಾಂಡ್ಯಾ ಮತ್ತು ಭುವನೇಶ್ವರ್ ಕುಮಾರ್ ಅವರ  ಅಮೋಘ ಜೊತೆಯಾಟ ದಾಖಲೆಯೊಂದನ್ನು ಬರೆದಿದೆ.
ನಿನ್ನೆ ನಡೆದ ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತೀಯ ಆಟಗಾರರು ಆಫ್ರಿಕಾದ ಪ್ರಬಲ ಬೌಲಿಂಗ್ ದಾಳಿ ಎದುರಿಸಲಾಗದೇ ತರಗೆಲೆಗಳಂತೆ ವಿಕೆಟ್ ಒಪ್ಪಿಸಿದರು. ಆದರೆ 8ನೇ ವಿಕೆಟ್ ನಲ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯಾ  ಮತ್ತು ಭುವನೇಶ್ವರ್ ಕುಮಾರ್ ಜೋಡಿ ಅಮೋಘ ಆಟದ ಪ್ರದರ್ಶನ ನೀಡುವ ಮೂಲಕ ದಾಖಲೆಯೊಂದನ್ನು ಬರೆದಿದೆ. 8ನೇ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 99 ರನ್ ಗಳಿಸಿದರು. ಒಂದು ಬದಿಯಲ್ಲಿ ಹಾರ್ದಿಕ್ ಪಾಂಡ್ಯಾ  ಬೌಂಡರಿ ಮತ್ತು ಸಿಕ್ಸರ್ ಗಳ ಮೂಲಕ ಸ್ಫೋಟಕ ಆಟ ಪ್ರದರ್ಶಿಸುತ್ತಿದ್ದರೆ ಮತ್ತೊಂದು ಬದಿಯಲ್ಲಿ ಅವರಿಗೆ ಉತ್ತಮ ಸಾಥ್ ನೀಡಿದ ಭುವಿ ತಾಳ್ಮೆ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರು.
ಭಾರತದ ಇನ್ನಿಂಗ್ಸ್ ನ ಆಂತಿಮ ಘಟ್ಟದಲ್ಲಿ ಭುವನೇಶ್ವರ್ ಕುಮಾರ್ ಜೊತೆಗೂಡಿ 99 ರನ್ ಗಳ ಅಮೂಲ್ಯ ಜೊತೆಯಾಟ ನೀಡಿದರು. ಆ ಮೂಲಕ ಈ ಮತ್ತೊಂದು ದಾಖಲೆ ಬರೆದ ಪಾಂಡ್ಯಾ-ಭುವಿ ಜೋಡಿ, ಆಫ್ರಿಕನ್ನರ ವಿರುದ್ಧ 8ನೇ  ವಿಕೆಟ್ ನಲ್ಲಿ ಅತೀ 2ನೇ ಅತೀ ಹೆಚ್ಚು ರನ್ ಗಳ ಜೊತೆಯಾಟವಾಡಿದ ಆಟಗಾರರೆನಿಸಿಕೊಂಡರು. ಈ ಹಿಂದೆ ಡರ್ಬನ್ ನಲ್ಲಿ ಪ್ರವೀಣ್ ಅಮ್ರೆ ಮತ್ತು ಕಿರಣ್ ಮೋರೆ ಜೋಡಿ ಆಫ್ರಿಕಾ ವಿರುದ್ಧ 8ನೇ ವಿಕೆಟ್ ಜೊತೆಯಾಟದಲ್ಲಿ 101 ರನ್  ಕಲೆಹಾಕಿದ್ದರು. ಇದು ಈ ವರೆಗಿನ ಅತೀ ಹೆಚ್ಚು ರನ್ ಗಳ ಜೊತೆಯಾಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com