ದೀರ್ಘಾವಧಿ ನಾಯಕತ್ವಕ್ಕೆ ಕೊಹ್ಲಿ ಸೂಕ್ತವೆ? ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಪ್ರಶ್ನೆ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಕುರಿತು ಪ್ರಶ್ನೆ ಎತ್ತಿದ್ದಾರೆ.
ಗ್ರೇಮ್ ಸ್ಮಿತ್
ಗ್ರೇಮ್ ಸ್ಮಿತ್
ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಕುರಿತು ಪ್ರಶ್ನೆ ಎತ್ತಿದ್ದಾರೆ. ದೀರ್ಘಾವಧಿ ನಾಯಕತ್ವಕ್ಕೆ ಕೊಹ್ಲಿ ಸೂಕ್ತ ಆಯ್ಕೆ ಆಗಿದ್ದಾರೆಯೆ ಎಂದು ಸ್ಮಿತ್ ಪ್ರಶ್ನಿಸಿದ್ದಾರೆ.
ಇಎಸ್ ಪಿಎನ್ ಕ್ರಿಕ್ ಇನ್ಫೋ ವೆಬ್ ತಾಣದ ಪ್ರಕಾರ, ದಕ್ಷಿಣ ಆಫ್ರಿಕಾದ ಟಿವಿ ನೆಟ್ ವರ್ಕ್ ಸೂಪರ್ ಸ್ಪೋರ್ಟ್ ಆಯೋಜಿಸಿದ್ದ ಉಪಹಾರ ಸಮಾರಂಭದಲ್ಲಿ, ಸ್ಮಿತ್, ಕೊಹ್ಲಿ ನಾಯಕತ್ವದ ಕುರಿತು ಮಾತನಾಡಿದ್ದಾರೆ.
"ನಾನು ಅವರನ್ನು ಕಂಡಾಗ ನನಗೆ ಕೊಹ್ಲಿ ಭಾರತದ ಫಾಲಿಗೆ ದೀರ್ಘಾವಧಿ ನಾಯಕನಾಗುವ ಆಯ್ಕೆ ಆಗಲಿದ್ದಾರೆ ಎನ್ನುವುದು ತಿಳಿದಿರಲಿಲ್ಲ. 
"ಈ ವರ್ಷದ ಕೊನೆಯಲ್ಲಿ, ಅವರು ಸ್ವಲ್ಪ ಕಾಲ ಮನೆಯಿಂದ ದೂರವಿರುತ್ತಿದ್ದರು, ಆ ವೇಳೆ ಅವರು ಮಾದ್ಯಮದವರಿಂದ ಎದುರಿಸಬೇಕಾಗಿದ್ದ ಒತ್ತಡದ ಬಗೆಗೆ ನನಗೆ ಅರಿವಿದೆ. ನಾಯಕತ್ವದ ಪ್ರಶ್ನೆ ಬಂದಾಗ ಭಾರತಕ್ಕೆ ಅವರು ಮಾತ್ರ ಸಿಗುತ್ತಾರೆ ಆದರೆ ಇದರ ಹೊರತಾಗಿ, ತಂಡದ ಫಾರ್ಮ್ ಗಮನಿಸಿದರೆ, ನನಗೆ ವಿರಾಟ್ ಕೊಹ್ಲಿ ಉತ್ತಮ ನಾಯಕನಂತೆ ಕಾಣಿಸುತ್ತಿಲ್ಲ 
"ನಾನು ವಿರಾಟ್ ನನ್ನು ಕಂಡಂತೆ, ಅವರಿಗೆ ಬೆಂಬಲವಾಗಿ ನಿಲ್ಲುವುದಕ್ಕೆ ಯಾರಾದರೂ ಬೇಕಾಗುತ್ತಾರೆ ಎಂದು ನಾನು ಭಾವಿಸುತ್ತೇನೆ, ಹಾಗೆ ಸಿಕ್ಕವರು ಕೊಹ್ಲಿಗೆ ರಚನಾತ್ಮಕವಾಗಿ ಸವಾಲು ಹಾಕುವ ಮುಖೇನ ಬೆಳೆಯಲು ಸಹಾಯ ಮಾಡುತ್ತಾರೆ.
"ಅವರು  ಕೌಶಲ್ಯವನ್ನು ಹೊಂದಿದ್ದಾರೆ, ಅವರು ತಮ್ಮದೇ ಆದ ಆಟದ ಶೈಲಿಯನ್ನು ತಿಳಿದಿದ್ದಾರೆ, ಎಲ್ಲರಲ್ಲಿಯೂ ಅವರು ಕ್ಷೇತ್ರದ ಗುಣಮಟ್ಟವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರನೆನ್ನುವುದು ನಮಗೆ ತಿಳಿದಿದೆ.  ಅವರ ತೀಕ್ಷ್ಣತೆಯು ಅವರ ವೈಯಕ್ತಿಕ ಆಟಕ್ಕೆ ನಿಜವಾಗಿಯೂ ಪ್ರಯೋಜನಕಾರಿಯಾಗಿದೆ, ಸಮರ್ಥ ಎದುರಾಳಿಯನ್ನು ಅವರು ಬಯಸುತ್ತಾರೆ." ಸ್ಮಿತ್ ಹೇಳಿದರು.
29ರ ಹರೆಯದ ಕೊಹ್ಲಿ ತಮ್ಮ ನಾಯಕತ್ವದಲ್ಲಿ ವಿಶ್ವದ ಅಗ್ರ ತಂಡಗಳ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಸೋತ ಬಳಿಕ ನಾಯಕ ಕೊಹ್ಲಿ ನಾನಾ ಟಿಕೆಗಳನ್ನು ಕೇಳಬೇಕಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com