ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಐಪಿಎಲ್ ಹರಾಜು 2018: ಭಾರತದ ಉದಯೋನ್ಮುಖ ಆಟಗಾರ ಉನಾದ್ಕತ್ ಅತ್ಯಂತ ದುಬಾರಿ ಆಟಗಾರ!

2018ನೇ ಸಾಲಿನ ಐಪಿಎಲ್ ನ 2ನೇ ದಿನದ ಹರಾಜು ಪ್ರಕ್ರಿಯೆ ಭರದಿಂದ ಸಾಗಿದ್ದು, ಭಾರತದ ಉದಯೋನ್ಮುಖ ಆಟಗಾರ ಜೈದೇವ್ ಉನಾದ್ಕತ್ ಈ ಬಾರಿಯ ಅತ್ಯಂತ ದುಬಾರಿ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರು: 2018ನೇ ಸಾಲಿನ ಐಪಿಎಲ್ ನ 2ನೇ ದಿನದ ಹರಾಜು ಪ್ರಕ್ರಿಯೆ ಭರದಿಂದ ಸಾಗಿದ್ದು, ಭಾರತದ ಉದಯೋನ್ಮುಖ ಆಟಗಾರ ಜೈದೇವ್ ಉನಾದ್ಕತ್ ಈ ಬಾರಿಯ ಅತ್ಯಂತ ದುಬಾರಿ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಮೂಲಗಳ ಪ್ರಕಾರ ಉನಾದ್ಕತ್ ಬರೊಬ್ಬರಿ 11.5 ಕೋಟಿ ರೂಗಳಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದು, ನಂತರದ ಸ್ಥಾನದಲ್ಲಿ ಭಾರತ ತಂಡದ ಕೆಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಇದ್ದಾರೆ. ಇಬ್ಬರು  ಆಟಗಾರರು ತಲಾ 11 ಕೋಟಿ ರೂಗಳಿಗೆ ಬಿಕರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸೌರಾಷ್ಟ್ರದ ಬೌಲರ್ ಉನಾದ್ಕತ್ ಅವರು ಕಳೆದ ವರ್ಷ ಐಪಿಎಲ್ ಟೂರ್ನಿಯಲ್ಲಿ ರೈಸಿಂಗ್ ಪುಣೆ ಸೂಪರ್‌ ಜೈಂಟ್ಸ್ ತಂಡದಲ್ಲಿದ್ದರು. 12  ಪಂದ್ಯಗಳಲ್ಲಿ 24 ವಿಕೆಟ್ ಗಳಿಸಿದ್ದ ಉನಾದ್ಕತ್, ಗರಿಷ್ಠ ವಿಕೆಟ್ ಗಿಟ್ಟಿಸಿಕೊಂಡ ಎರಡನೇ ಬೌಲರ್ ಎನಿಸಿಕೊಂಡಿದ್ದರು. 
ಇನ್ನು ಕಳೆದ ವರ್ಷ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉನಾದ್ಕತ್ ಭಾರತ 3-0 ಸರಣಿ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.
ಇಳಿದಂತೆ ಕರ್ನಾಟಕದ ಕೃಷ್ಣಪ್ಪ ಗೌತಮ್ 6.2 ಕೋಟಿ ರೂಗಳಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದು, ಡೆಲ್ಲಿ ಡೇರ್‌ ಡೆವಿಲ್ಸ್ ತಂಡ ಜಾರ್ಖಂಡ್‌ ನ ಶಹಬಾಝ್ ನದೀಮ್ ಅವರನ್ನು 3.2 ಕೋಟಿ ರೂಗಳಿಗೆ ಖರೀದಿ  ಮಾಡಿದೆ. ಪಂಜಾಬ್‌ನ ಬೌಲರ್ ಸಂದೀಪ್ ಶರ್ಮಾ 3 ಕೋಟಿ ರೂ ಗಳಿಗೆ ಸನ್‌ ರೈಸರ್ಸ್‌ ಹೈದರಾಬಾದ್ ಗೆ, ಮುಹಮ್ಮದ್ ಸಿರಾಜ್ 2.6 ಕೋಟಿ ರೂಗಳಿಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ, ಶಾರ್ದೂಲ್ ಠಾಕೂರ್  2.6 ಕೋಟಿ ರೂಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ಅಂತೆಯೇ ಮೋಹಿತ್ ಶರ್ಮಾ 2.4 ಕೋಟಿ ರೂಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ, ನಥಾನ್ ಕೌಲ್ಟರ್ ನೀಲ್ 2.2 ಕೋಟಿ ರೂಗಳಿಗೆ ಮತ್ತು ವಾಷಿಂಗ್ಟನ್ ಸುಂದರ್ 3.2 ಕೋಟಿ ರೂಗಳಿಗೆ ಆರ್‌ಸಿಬಿ ತಂಡಕ್ಕೆ, ಬೆನ್  ಕಟ್ಟಿಂಗ್ 2.2 ಕೋಟಿ ರೂಗಳಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತು ಡ್ಯಾನ್ ಕ್ರಿಶ್ಟಿಯನ್ 1.5 ಕೋಟಿ .ರೂ.ಗಳಿಗೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪಾಲಾಗಿದ್ದಾರೆ.
ಉಳಿದಂತೆ ಇಂಗ್ಲೆಂಡ್ ನ ಕೋರಿ ಆ್ಯಂಡರ್ಸನ್, ಇಯಾನ್ ಮೊರ್ಗನ್, ಅಲೆಕ್ಸ್ ಹೇಲ್ಸ್, ಆಸ್ಟ್ರೇಲಿಯಾದ ಶಾನ್ ಮಾರ್ಷ್, ಮೊಯ್ಸಿಸ್ ಹೆನ್ರಿಕ್ಸ್, ವಿಂಡೀಸ್ ಲೆಂಡ್ಲ್ ಸಿಮೊನ್ಸ್, ಭಾರತದ ರಿಷಿ ಧವನ್, ಹರ್ಪ್ರೀತ್ ಭಾಟಿಯಾ,  ಉನ್ಮುಕ್ತ್ ಚಾಂದ್, ಅಮನ್ ದೀಪ್ ಖಾರೆ, ವಿರಾಟ್ ಸಿಂಗ್, ಬಾಬಾ ಅಪಾರ್ಜಿತ್ ಮಾರಾಟವಾಗದೇ ಉಳಿದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com