ದಾಖಲೆ ಬರೆದ ಕುಲದೀಪ್ ಯಾದವ್: ಏಕದಿನ ಪಂದ್ಯದಲ್ಲಿ 6 ವಿಕೆಟ್ ಪಡೆದ ಮೊದಲ ಎಡಗೈ ಸ್ಪಿನ್ನರ್

ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಬೆನ್ನೆಲುಬು ಮುರಿದ ಭಾರತ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.
ಕುಲದೀಪ್ ಯಾದವ್
ಕುಲದೀಪ್ ಯಾದವ್
ನಾಟಿಂಗ್ ಹ್ಯಾಮ್: ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಬೆನ್ನೆಲುಬು ಮುರಿದ ಭಾರತ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.
ಈ ಹಿಂದೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಐದು ವಿಕೆಟುಗಳ ಸಾಧನೆ ಮಾಡಿದ್ದ ಚೈನಾಮನ್ ಖ್ಯಾತಿಯ ಕುಲ್‌ದೀಪ್ ಯಾದವ್, ಇದೀಗ ಆಂಗ್ಲರ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲೂ ಆರು ವಿಕೆಟ್ ಗಳನ್ನು ಕಬಳಿಸಿ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ. 
ಇಂಗ್ಲೆಂಡ್ ವಿರುದ್ಧ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 25 ರನ್ ನೀಡಿ ಕುಲ್‌ದೀಪ್ ಪ್ರಮುಖ ಆರು ವಿಕೆಟ್ ಗಳನ್ನು ಕಬಳಿಸಿದ್ದರು. ಇಂಗ್ಲೆಂಡ್ ತಂಡದ ಆರಂಭಿಕರಾದ ಜೇಸನ್ ರಾಯ್, ಬೇರ್ ಸ್ಟೋ, ಜೋ ರೂಟ್, ಬೆನ್ ಸ್ಚೋಕ್ಸ್, ಜಾಸ್ ಬಟ್ಲರ್ ಮತ್ತು ಡೇವಿಡ್ ವಿಲ್ಲೇ ಅವರ ವಿಕೆಟ್ ಗಳನ್ನುಪಡೆಯುವ ಮೂಲಕ ಕುಲದೀಪ್ ಯಾದವ್ ಏಕದಿನ ಪಂದ್ಯದಲ್ಲಿ 6 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಅಂತೆಯೇ ಏಕದಿನದಲ್ಲಿ ಆರು ವಿಕೆಟುಗಳನ್ನು ಪಡೆದ ವಿಶ್ವದ ಮೊದಲ ಮಣಿಕಟ್ಟಿನ ಸ್ಪಿನ್ನರ್ (ಎಡಗೈ) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 
ಇದಲ್ಲದೆ ಕುಲದೀಪ್ ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದು, ದಾಖಲೆಗಳ ಪುಟ್ಟ ವಿವರ ಇಲ್ಲಿದೆ.
1. 25 ಕ್ಕೆ 6 ವಿಕೆಟ್, ಏಕದಿನದಲ್ಲಿ ಎಡಗೈ ಸ್ಪಿನ್ನರ್‌ನ ಶ್ರೇಷ್ಠ ಸಾಧನೆ.
2. ಇಂಗ್ಲೆಂಡ್‌ನಲ್ಲಿ ಏಕದಿನ ಪಂದ್ಯದಲ್ಲಿ ಯಾವುದೇ ಸ್ಪಿನ್ನರ್‌ನಿಂದ ಶ್ರೇಷ್ಠ ಬೌಲಿಂಗ್ ಸಾಧನೆ
3. ಏಕದಿನದಲ್ಲಿ ಇಂಗ್ಲೆಂಡ್ ವಿರುದ್ಧ ಯಾವುದೇ ಸ್ಪಿನ್ನರ್‌ನಿಂದ ಶ್ರೇಷ್ಠ ಸಾಧನೆ
4. ಏಕದಿನದಲ್ಲಿ ಭಾರತೀಯ ಬೌಲರ್‌ ನ ನಾಲ್ಕನೇ ಶ್ರೇಷ್ಠ ಪ್ರದರ್ಶನ
ಇಂಗ್ಲೆಂಡ್ ನೆಲದಲ್ಲಿ ಸ್ಪಿನ್ನರ್‌ ನಿಂದ ಶ್ರೇಷ್ಟ ಬೌಲಿಂಗ್ ಸಾಧನೆ ವಿವರ
6/25 ಕುಲ್‌ದೀಪ್, ಟ್ರೆಂಟ್ ಬ್ರಿಡ್ಜ್, 2018 (ಇಂಗ್ಲೆಂಡ್ ವಿರುದ್ಧ)
5/11 ಶಾಹೀದ್ ಆಫ್ರಿದಿ, ಎಡ್ಜ್‌ಬಾಸ್ಟನ್, 2004 (ಕೀನ್ಯಾ ವಿರುದ್ಧ)
5/18 ಆಂಡ್ರ್ಯೂ ಸೈಮಂಡ್ಸ್, ಮ್ಯಾಂಚೆಸ್ಟರ್, 2005  (ಬಾಂಗ್ಲಾದೇಶ ವಿರುದ್ಧ )
5/27 ಅದಿಲ್ ರಶೀದ್, ಬ್ರಿಸ್ಟಾಲ್, 2017 (ಐರ್ಲೆಂಡ್ ವಿರುದ್ಧ)
ಏಕದಿನದಲ್ಲಿ ಭಾರತೀಯ ಬೌಲರ್‌ನ ಶ್ರೇಷ್ಠ ಸಾಧನೆ: 
6/04 ಸ್ಟುವರ್ಟ್ ಬಿನ್ನಿ, ಮೀರ್‌ಪುರ, 2014 (ಬಾಂಗ್ಲಾದೇಶ ವಿರುದ್ಧ)
6/12 ಅನಿಲ್ ಕುಂಬ್ಳೆ, ಕೋಲ್ಕೊತಾ, 1993 (ವೆಸ್ಟ್ಇಂಡೀಸ್ ವಿರುದ್ದ )
6/23 ಆಶಿಶ್ ನೆಹ್ರಾ, ಡರ್ಬನ್, 2003 (ಇಂಗ್ಲೆಂಡ್ ವಿರುದ್ಧ)
6/25 ಕುಲ್‌ದೀಪ್ ಯಾದವ್, ಟ್ರೆಂಟ್ ಬ್ರಿಡ್ಜ್, 2018 (ಇಂಗ್ಲೆಂಡ್ ವಿರುದ್ಧ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com