ಲಂಡನ್: ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ದಾಖಲೆ ಬರೆದಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿರುವ ಎಂಎಸ್ ಧೋನಿ ತ್ರಿಶತಕ ಬಾರಿಸಿದ್ದಾರೆ. ಧೋನಿ ತ್ರಿಶತಕ ಬಾರಿಸಿರುವುದು ಬ್ಯಾಟಿಂಗ್ ನಲ್ಲಲ್ಲ. ಕ್ಯಾಚ್ ನಲ್ಲಿ. ಹೌದು ಧೋನಿ 300 ಕ್ಯಾಚ್ ಪಡೆದಿರುವ ಸಾಧನೆ ಮಾಡಿದ್ದಾರೆ.
300ನೇ ಕ್ಯಾಚ್ ಪಡೆಯುವ ಮೂಲಕ ಎಂಎಸ್ ಧೋನಿ ಅತೀ ಹೆಚ್ಚು ಕ್ಯಾಚ್ ಪಡೆದಿರುವ ವಿಕೆಟ್ ಕೀಪರ್ ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆ್ಯಡಂ ಗಿಲ್ ಕ್ರಿಸ್ಟ್ 417 ಕ್ಯಾಚ್ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ 403 ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕರ 402 ಕ್ಯಾಚ್ ಗಳನ್ನು ಪಡೆದಿದ್ದಾರೆ.