ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಹಗರಣ: ಫಾರೂಖ್ ಅಬ್ದುಲ್ಲಾ ಸೇರಿ ನಾಲ್ವರ ವಿರುದ್ಧ ಜಾರ್ಜ್ ಶೀಟ್

ನಕಲಿ ಬ್ಯಾಂಕ್ ಖಾತೆ ಸೃಷ್ಟಿಸುವ ಮೂಲಕ ಜಮ್ಮು -ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಪಾರೂಖ್ ಅಬ್ದುಲ್ಲಾ ಸೇರಿ ನಾಲ್ವರ ವಿರುದ್ಧ ಸಿಬಿಐ ಇಂದು ಜಾರ್ಜ್ ಶೀಟ್ ದಾಖಲಿಸಿದೆ.
ಪಾರೂಖ್ ಅಬ್ದುಲ್ಲಾ
ಪಾರೂಖ್ ಅಬ್ದುಲ್ಲಾ
Updated on: 

ನವದೆಹಲಿ: ನಕಲಿ ಬ್ಯಾಂಕ್ ಖಾತೆ ಸೃಷ್ಟಿಸುವ ಮೂಲಕ ಜಮ್ಮು -ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಹಣ ದುರ್ಬಳಕೆ   ಆರೋಪಕ್ಕೆ ಸಂಬಂಧಿಸಿದಂತೆ  ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಹಾಗೂ ಇನ್ನಿತರ ಮೂವರ ವಿರುದ್ಧ ಸಿಬಿಐ ಇಂದು ಜಾರ್ಜ್ ಶೀಟ್ ದಾಖಲಿಸಿದೆ.

 2001ರಲ್ಲಿ ಫಾರೂಖ್ ಅಬ್ದುಲ್ಲಾ ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಆ ಅವಧಿಯಲ್ಲಿ ಸುಮಾರು 113 ಕೋಟಿ ರೂಪಾಯಿ ಹಣವನ್ನು  ಕ್ರಿಕೆಟ್ ಅಸೋಸಿಯೇಷನ್  ಅಧಿಕಾರಿಗಳ ಮೂಲಕ  ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿತ್ತು.

ಚಾರ್ಚ್ ಶೀಟ್ ನಲ್ಲಿ ಅಬ್ದುಲ್ಲಾ ಜೊತೆಗೆ ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೊಸಿಯೇಷನ್  ಕಾರ್ಯದರ್ಶಿ  ಸಲೀಂ ಖಾನ್, ಖಜಾಂಚಿ ಮೊಹಮ್ಮದ್ ಅಹಸಾನ್ ಮಿರ್ಜಾ ಮತ್ತು ಜಮ್ಮು-ಕಾಶ್ಮೀರ ಬ್ಯಾಂಕು ಎಕ್ಸಿಕ್ಯೂಟಿವ್  ಬಸೀರ್ ಅಹ್ಮದ್ ಮಾಂಸಿರ್  ಹೆಸರನ್ನು ಸೇರಿಸಲಾಗಿದೆ.

ಈ ವಿಚಾರದ ಬಗ್ಗೆ ಪೊಲೀಸರು ಮೊದಲಿನಿಂದಲೂ ತನಿಖೆ ನಡೆಸುತ್ತಿದ್ದು, ರಾಮ್ ಮುನ್ಷಿ ಬಾಗ್ ಠಾಣೆಯಲ್ಲಿ  ಎಫ್ ಐಆರ್ ದಾಖಲಿಸಲಾಗಿದೆ.

ಸೆಪ್ಟೆಂಬರ್ 2015 ರಲ್ಲಿ ಸಿಬಿಐ ಎಫ್ ಐರ್ ದಾಖಲಿಸಿದ ನಂತರ , ತನಿಖೆ ಆರಂಭವಾಗಿರುವುದಕ್ಕೆ ತಮ್ಮಗೆ ಸಂತೋಷವಾಗುತ್ತಿದೆ. ಸಿಬಿಐ ನಿಷ್ ಪಕ್ಷಪಾತವಾಗಿ ತನಿಖೆ ನಡೆಸಲಿದೆ ಎಂಬ ವಿಶ್ವಾಸ ಇರುವುದಾಗಿ ಫಾರೂಖ್ ಅಬ್ದುಲ್ಲಾ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com