ಮೇಡಮ್‌ ಟುಸ್ಸಾಡ್ಸ್ ನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಅನಾವರಣ

ಜಗತ್ತಿನ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೇಡಮ್‌ ಟುಸ್ಸಾಡ್ಸ್ ಮ್ಯೂಸಿಯಂನ....
ವಿರಾಟ್ ಕೊಹ್ಲಿ ಮೇಣದ ಪ್ರತಿಮೆ
ವಿರಾಟ್ ಕೊಹ್ಲಿ ಮೇಣದ ಪ್ರತಿಮೆ
Updated on: 
ನವದೆಹಲಿ: ಜಗತ್ತಿನ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೇಡಮ್‌ ಟುಸ್ಸಾಡ್ಸ್ ಮ್ಯೂಸಿಯಂನ ದೆಹಲಿ ಶಾಖೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಲಾಗಿದೆ.
ಈಗಗಾಲೇ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಕ್ರಿಕೆಟ್‌ ದಿಗ್ಗಜರಾದ ಕಪಿಲ್‌ ದೇವ್‌, ಸಚಿನ್‌ ತೆಂಡೂಲ್ಕರ್‌, ಅರ್ಜೆಂಟೀನಾದ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಮೇಣದ ಪ್ರತಿಮೆಗಳಿದ್ದು, ಈಗ ವಿರಾಟ್ ಕೊಹ್ಲಿ ಪ್ರತಿಮೆ ಕೂಡ ಸೇರ್ಪಡೆಯಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್‌ ಕೊಹ್ಲಿ, 'ನನ್ನ ಮೇಣದ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ದೊಡ್ಡ ಗೌರವ. ಜೀವಮಾನದ ನೆನಪಿಗಾಗಿ ಮ್ಯಾಡಮ್‌ ಟುಸ್ಸಾಡ್ಸ್‌ಗೆ ಕೃತಜ್ಞತೆಗಳು,' ಎಂದಿದ್ದಾರೆ. 
ಇತ್ತೀಚಿಗೆ ಲಂಡನ್ ನಿಂದ ದೆಹಲಿ ಆಗಮಿಸಿದ್ದ ಪರಿಣತ ಕಲಾವಿದರ ತಂಡ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆ ನಿರ್ಮಿಸಿದೆ. ಇದಕ್ಕಾಗಿ ವಿರಾಟ್‌ ಅವರ ದೇಹದ 200 ನಿರ್ದಿಷ್ಟ ಅಳತೆಗಳು ಹಾಗೂ ಚಿತ್ರಗಳನ್ನು ಅವರು ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com