'ಮಹಿಳಾ ಕ್ರಿಕೆಟ್ ನ ದಂತಕಥೆ' : ವಿರಾಟ್ ಕೊಹ್ಲಿ ದಾಖಲೆ ಮುರಿದ ಮಿಥಾಲಿ ರಾಜ್

ಮಹಿಳಾ ಕ್ರಿಕೆಟ್ ನ ಭಾರತದ ದಂತಕಥೆ ಮಿಥಾಲಿ ರಾಜ್ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೌಲಾಲಂಪುರ: ಮಹಿಳಾ ಕ್ರಿಕೆಟ್ ನ ಭಾರತದ ದಂತಕಥೆ ಮಿಥಾಲಿ ರಾಜ್ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಕೌಲಾಲಂಪುರದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾ ಕಪ್ ಚಾಂಪಿಯನ್ಸ್ ಟ್ರೋಫಿ ವೇಳೆ ಮಿಥಾಲಿ ರಾಜ್ 2 ಸಾವಿರ ರನ್ ಪೇರಿಸುವುದರ ಮೂಲಕ ಭಾರತದ ಮಹಿಳಾ ಕ್ರಿಕೆಟಿನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.  ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ  23 ರನ್ ಗಳಿಸುವ ಮೂಲಕ 2000 ರನ್ ಗಡಿ ದಾಟಿದರು.  ಆ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟ್ ಆಟಗಾರ್ತಿ ಮತ್ತು ವಿಶ್ವದ ಮಹಿಳಾ ಕ್ರಿಕೆಟಿಗರಲ್ಲಿ 4ನೇಯವರಾಗಿದ್ದಾರೆ.
ಈ ಮೊದಲು ಇಂಗ್ಲೆಂಡಿನ ಕ್ಯಾರ್ಲೋಟ್ ಎಡ್ವರ್ಡ್, ವೆಸ್ಟ್ ಇಂಡೀಸ್ ನ ಸ್ಟಫೈನಿ ಟೈಲರ್  ಹಾಗೂ ನ್ಯೂಜಿಲೆಂಡಿನ ಸುಜಿ ಬ್ಯಾಟ್ಸ್  2 ಸಾವಿರ ರನ್ ಪೂರೈಸಿದ್ದರು. 35 ವರ್ಷದ ಮಿಥಾಲಿ 38.01 ಸರಾಸರಿಯಲ್ಲಿ 14 ಅರ್ಧ ಶತಕಗಳು ಬಾರಿಸಿದ್ದು 74 ರನ್ ಗಳು ಅವರ ವೈಯುಕ್ತಿಕ ಅತ್ಯುತ್ತಮ ರನ್ ಗಳಿಕೆಯಾಗಿದೆ.  
ಇನ್ನು ಪುರುಷರ ಟಿ20 ಕ್ರಿಕೆಟಿನಲ್ಲಿ ನ್ಯೂಜಿಲೆಂಡಿನ ಮಾರ್ಟಿನ್ ಗಪ್ಟಿಲ್, ಬ್ರೆಂಡನ್ ಮೆಕಲಮ್ 2 ಸಾವಿರ ಪೂರೈಸಿದ್ದರೆ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 1983 ಸನಿಹದಲ್ಲಿದ್ದಾರೆ. ಮಿಥಾಲಿ ಸಾಧನೆಗೆ ಬಿಸಿಸಿಐ ಹಾಗೂ ಐಸಿಸಿ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com