ಬೆಂಗಳೂರು: ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 347 ರನ್ ಪೇರಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 78 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 347 ರನ್ ಬಾರಿಸಿದೆ.
ಮಳೆಯಿಂದಾಗಿ ಪಂದ್ಯವನ್ನು ಎರಡು ಬಾರಿ ತಾತ್ಕಾಲಿಕವಾಗಿ ರದ್ದು ಮಾಡಲಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ವ್ಯವಸ್ಥೆ ಇದ್ದಿದ್ದರಿಂದ ಪಂದ್ಯವನ್ನು ಶೀಘ್ರದಲ್ಲೇ ಆರಂಭಿಸಲಾಯಿತು.
ಟೀಂ ಇಂಡಿಯಾ ಪರ ಶಿಖರ್ ಧವನ್ 107, ಮುರಳಿ ವಿಜಯ್ 105, ಕೆಎಲ್ ರಾಹುಲ್ 54, ಚೇತೇಶ್ವರ ಪೂಜಾರಾ 35, ಅಜಿಂಕ್ಯ ರಹಾನೆ 10, ದಿನೇಶ್ ಕಾರ್ತಿಕ್ 4, ಹಾರ್ದಿಕ್ ಪಾಂಡ್ಯ ಅಜೇಯ 10 ಮತ್ತು ಆರ್ ಅಶ್ವಿನ್ ಅಜೇಯ 7 ರನ್ ಬಾರಿಸಿದ್ದಾರೆ.
ಆಫ್ಘಾನ್ ಪರ ಯಾಮಿನ್ ಅಹ್ಮದ್‌ಜೈ 2, ವಫಾದಾರ್, ರಶೀದ್ ಖಾನ್ ಮತ್ತು ರೆಹಮನ್ ತಲಾ 1 ವಿಕೆಟ್ ಪಡೆದಿದ್ದಾರೆ.