ಮುಂಬೈನಲ್ಲಿ ಪತಿ ಕೊಹ್ಲಿಯೊಂದಿಗೆ ನಟಿ ಅನುಷ್ಕಾ ಶರ್ಮಾ ತೆರಳುತ್ತಿದ್ದಾಗ ಐಷಾರಾಮಿ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿ ಕಸ ಬಿಸಾಡಿದ್ದಾರೆ. ಇದನ್ನು ಗಮನಿಸಿದ ಅನುಷ್ಕಾ ತಮ್ಮ ಕಾರಿನ ಗಾಜು ಇಳಿಸಿ, ಆತನ ವಿರುದ್ಧ ಗರಂ ಆಗಿದ್ದಾರೆ. 'ರಸ್ತೆಯ ಮೇಲೇಕೆ ಕಸ ಬಿಸಾಡುತ್ತಿದ್ದೀರಿ?, ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್ ಎಸೆಯುವಂತಿಲ್ಲ. ದಯವಿಟ್ಟು ಕಾಳಜಿ ವಹಿಸಿ' ಎಂದು ಸ್ವಚ್ಛತೆಯ ಪಾಠ ಮಾಡಿದ್ದಾರೆ.