ಎಂಎಸ್ ಧೋನಿ
ಕ್ರಿಕೆಟ್
ಇಂಗ್ಲೆಂಡ್ ಪ್ರವಾಸಕ್ಕಾಗಿ ಬೆಂಗಳೂರಿನಲ್ಲಿ ಎಂಎಸ್ ಧೋನಿಯ ಕಠಿಣ ಅಭ್ಯಾಸ ಹೇಗಿದೆ ಗೊತ್ತಾ?
ಏಕದಿನ ಮತ್ತು ಟಿ20 ಪಂದ್ಯಗಳಿಗೆ ಸೀಮಿತವಾಗಿರುವ ಟೀಂ ಇಂಡಿಯಾದ ಆಟಗಾರ ಮಾಜಿ ನಾಯಕ ಎಂಎಸ್ ಧೋನಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಬೆಂಗಳೂರಿನಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದಾರೆ...
ಬೆಂಗಳೂರು: ಏಕದಿನ ಮತ್ತು ಟಿ20 ಪಂದ್ಯಗಳಿಗೆ ಸೀಮಿತವಾಗಿರುವ ಟೀಂ ಇಂಡಿಯಾದ ಆಟಗಾರ ಮಾಜಿ ನಾಯಕ ಎಂಎಸ್ ಧೋನಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಬೆಂಗಳೂರಿನಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಾಕಷ್ಟು ತಯಾರಿ ನಡೆಸುತ್ತಿರುವ ಎಂಎಸ್ ಧೋನಿ ಯುವಕರನ್ನು ನಾಚಿಸುವಂತಾ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಜೂನ್ 15ರಂದು ಯೋಯೋ ಟೆಸ್ಟ್ ತೆಗೆದುಕೊಂಡಿದ್ದ ಅವರು ಇಂಗ್ಲೆಂಡ್ ಪ್ರವಾಸಕ್ಕಾಗಿ ಅಂತಿಮ ಅಭ್ಯಾಸದಲ್ಲಿ ತೊಡಗಿದ್ದಾರೆ.
ಟೀಂ ಇಂಡಿಯಾದ ಮಾಜಿ ಆಟಗಾರ ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಸಹ ತಮ್ಮ ನಿವೃತ್ತಿಗೂ ಮುನ್ನ ಮುಂಬೈನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು. ಇದೀಗ ಅದೇ ರೀತಿ ಎಂಎಸ್ ಧೋನಿ ಸಹ ಕಠಿಣ ಅಭ್ಯಾಸದಲ್ಲಿ ತೊಡಗಿರುವುದು ವಿಶೇಷ.
ದಿನಂಪ್ರತಿ ನೂರು ಎಸೆತಗಳನ್ನು ಎದುರಿಸುವ ಎಂಎಸ್ ಧೋನಿ ಅವರು ಶೇಕಡ 70ರಷ್ಟು ಎಸೆತಗಳನ್ನು ನಿರ್ಧಿಷ್ಟವಾಗಿ ಆಡುತ್ತಿದ್ದಾರೆ. ಇದೇ ರೀತಿ ಅವರು ಅಭ್ಯಾಸವನ್ನು ಮುಂದೂವರೆಸಿದರೆ ಜೂನ್ 27ರ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲರು.


