ಕೊಹ್ಲಿ ಪಡೆಯ ಅಂಡರ್-19 ವಿಶ್ವಕಪ್ ಗೆಲುವಿಗೆ 10 ವರ್ಷ!

10 ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಂಡರ್-19...
ವಿರಾಟ್ ಕೊಹ್ಲಿ ಪಡೆ
ವಿರಾಟ್ ಕೊಹ್ಲಿ ಪಡೆ
ಮುಂಬೈ: 10 ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಂಡರ್-19 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. 
2008ರಲ್ಲಿ ಮಲೇಷ್ಯಾದಲ್ಲಿ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಫೈನಲ್ ಪಂದ್ಯದಲ್ಲಿ ಭಾರತ ಡಿಆರ್ಎಸ್ ನಿಯಮದಂತೆ 12ರನ್ ಗಳಿಂದ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 
ವಿರಾಟ್ ಕೊಹ್ಲಿ ಪಡೆ 45 ಓವರ್ ನಲ್ಲಿ 159 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತ ಪರ ತನ್ಮಯ್ ಶ್ರೀವಾಸ್ತವ 46, ಕೊಹ್ಲಿ 19 ರನ್ ಗಳಿಸಿದ್ದರು. ಭಾರತ ಪರ ಅಜಿತೇಶ್ ಅರ್ಗಲ್, ರವೀಂದ್ರ ಜಡೇಜಾ ಮತ್ತು ಸಿದ್ದಾರ್ಥ್ ಕೌಲ್ ತಲಾ 2 ವಿಕೆಟ್ ಪಡೆದಿದ್ದರು. 
ಇದಕ್ಕೂ ಮುನ್ನ 2000ರಲ್ಲಿ ಮೊಹಮ್ಮದ್ ಕೈಫ್ ಸಾರಥ್ಯದಲ್ಲಿ ಭಾರತ ಶ್ರೀಲಂಕಾವನ್ನು 6 ವಿಕೆಟ್ ಗಳಿಂದ ಮಣಿಸಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com