ಭಾನುವಾರ ನಡೆದ ಶೇಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಸೀನ್ ಅಬಾಟ್ ಎಸೆದ ಬೌನ್ಸರ್ ಎಸೆತವೊಂದು ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್ ವಿಲ್ ಪುಕೋಸ್ಕಿ ಹೆಲ್ಮೆಟ್‌ಗೆ ಬಲವಾಗಿ ಅಪ್ಪಳಿಸಿತು. ಇದರಿಂದ ನೆಲಕ್ಕುರುಳಿದ ವಿಲ್ ಗಾಯಗೊಂಡು ನಿವೃತ್ತಿಯಾದರು. ಚೆಂಡು ಬಡಿದ ಬಳಿಕ ಮೈದಾನದಲ್ಲೇ ಚಿಕಿತ್ಸೆ ಪಡೆದ ವಿಲ್ ಕೆಲವು ನಿಮಿಷದ ಬಳಿಕ ಚೇತರಿಸಿಕೊಂಡರು. ಬಳಿಕ ವೈದ್ಯರು ಹಾಗೂ ಫಿಸಿಯೋ ತಜ್ಞರ ನೆರವಿನಿಂದ ಮೈದಾನದಿಂದ ಹೊರ ನಡೆದಿದ್ದರು. ಆದರೆ, ವಿಲ್ ಸರಿಯಾಗಿ ನಿಲ್ಲಲು ಪರದಾಡುತ್ತಿರುವಂತೆ ಕಂಡುಬಂದರು.