ಬಾಲಿವುಡ್ ನಟಿಯ ಮೋಹ ಪಾಶಕ್ಕೆ ಸಿಲುಕಿರುವ ಮೊಹಮ್ಮದ್ ಶಮಿ ಅವರು ಪತ್ನಿ ಹಸಿನ್ ಜಹಾನ್ ಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟಕ್ಕೂ ಹಸಿನ್ ಜಹಾನ್ ಯಾರು ಗೊತ್ತಾ? ಶಮಿ ಜತೆ ಮದುವೆಗೂ ಮುನ್ನ ಹಸಿನ್ ಮತ್ತೊಬ್ಬರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಹಸಿನ್ ಜಹಾನ್ 2014ರಲ್ಲಿ ಮೊಹಮ್ಮದ್ ಶಮಿ ಜತೆ ವಿವಾಹವಾಗಿದ್ದರು.