ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭುವಿ, ಭುಮ್ರಾ ಅನುಪಸ್ಥಿತಿಯ ತುಂಬಲು ಶಾರ್ದೂಲ್ ಠಾಕೂರ್ ಸಿದ್ಧ!

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೇ ಶ್ರೀಲಂಕಾದಲ್ಲಿ ತ್ರಿಕೋನ ಟಿ20 ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಕಿರಿಯ ಆಟಗಾರರು ಹಿರಿಯರ ಸ್ಥಾನ ತುಂಬುವ ಭರವಸೆ ಮೂಡಿಸಿದ್ದಾರೆ.
ಕೊಲಂಬೋ: ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೇ ಶ್ರೀಲಂಕಾದಲ್ಲಿ ತ್ರಿಕೋನ ಟಿ20 ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಕಿರಿಯ ಆಟಗಾರರು ಹಿರಿಯರ ಸ್ಥಾನ ತುಂಬುವ ಭರವಸೆ ಮೂಡಿಸಿದ್ದಾರೆ.
ಈ ಹಿಂದೆ ಆಶ್ವಿನ್, ರವೀಂದ್ರ ಜಡೇಜಾ ಸ್ಥಾನಕ್ಕೆ ಚಾಹಲ್ ಮತ್ತು ಕಲುದೀಪ್ ಯಾದಲ್ ಪರ್ಯಾವಾಗಿದ್ದರು. ಇದೀಗ ಭಾರತದ ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಜಸ್ ಪ್ರೀತ್ ಭುಮ್ರಾ ಅವರ ಸ್ಥಾನಕ್ಕೆ ತಾನು ಪರ್ಯಾಯವಾಗಿ ನಿಲ್ಲಬಲ್ಲೆ ಎಂದು ಶೂರ್ದೂಲ್ ಠಾಕೂರ್ ಭರವಸೆ ಮೂಡಿಸಿದ್ದಾರೆ. ಹೌದು ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಲಂಕಾ ತಂಡವನ್ನು ಕೇವಲ 152 ರನ್ ಗಳಿಗೆ ನಿಯಂತ್ರಿಸುವಲ್ಲಿ ಭಾರತ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ 4 ಓವರ್ ಎಸೆದು 27 ರನ್ ನೀಡಿ ಲಂಕಾದ ಪ್ರಮುಖ 4 ವಿಕೆಟ್ ಕಬಳಿಸಿದ್ದರು. ಆ ಮೂಲಕ ಲಂಕಾದ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು. 
ಈ ಬಗ್ಗೆ ಮಾತನಾಡಿದ ಶಾರ್ದೂಲ್ ಠಾಕೂರ್, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಜವಾಬ್ದಾರಿ ಮತ್ತು ಒತ್ತಡ ಎರಡೂ ಹೆಚ್ಚಾಗಿರುತ್ತದೆ. ಆದರೆ ನನಗೆ ಸವಾಲುಗಳು ಎಂದರೆ ಇಷ್ಟ. ಹಿರಿಯ ಅನುಪಸ್ಥಿತಿಯಲ್ಲಿ ಯಾರಾದರೂ ಅವರ ಸ್ಥಾನ ತುಂಬ ಬೇಕಾಗುತ್ತದೆ. ಹೀಗಾಗಿ ನಾನು ಆ ಪ್ರಯತ್ನ ಮಾಡಿದೆ. ಅದರಲ್ಲಿ ಯಶಸ್ವಿ ಕೂಡ ಆದೆ ಎಂದು ಹೇಳಿದ್ದಾರೆ. ಈ ಹಿಂದೆ ರಣಜಿ ಆಡುವಾಗಲೂ ನಾನು ಜಹೀರ್ ಖಾನ್, ಧವಳ್ ಕುಲಕರ್ಣಿ, ಅಜಿತ್ ಅಗರ್ಕರ್ ಅವರ ಅನುಪಸ್ಥಿತಿಯಲ್ಲಿ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದೆ. ಇದೇ ಅನುಭವ ಲಂಕಾ ವಿರುದ್ಧದ ಪಂದ್ಯದಲ್ಲಿ ನನಗೆ ನೆರವಿಗೆ ಬಂತು.
ಹಿರಿಯ ವೇಗಿಗಳು ವಿಶ್ರಾಂತಿಯಲ್ಲಿದ್ದುದರಿಂದ ಪೇಸ್ ಅಟ್ಯಾಕ್ ಜವಾಬ್ದಾರಿಯನ್ನು ನಾನು ಹೊರಬೇಕಾಯಿತು. ನಕಲ್ ಬಾಲ್ (ಸ್ಲೋ ವೇರಿಯೇಷನ್) ನನ್ನ ನೆರವಿಗೆ ಬಂತು. ಈ ತಂತ್ರಗಾರಿಕೆ ಕುರಿತು ಜಹೀರ್ ಖಾನ್ ಅವರು ನನಗೆ ತಿಳಿಸಿಕೊಟ್ಟಿದ್ದರು. ಜಹೀರ್ ಖಾನ್ ತಾವಾಡುತ್ತಿದ್ದ ಪಂದ್ಯದಳಲ್ಲಿ ಈ ತಂತ್ರವನ್ನು ಬಳಕೆ ಮಾಡಿದ್ದರು. ಆದರೆ ನಾನು ಆ ವಿಡಿಯೋಗಳನ್ನು ನೋಡಿರಲಿಲ್ಲ. ಆದರೆ ಅವರೊಂದಿಗೆ ಆಟವಾಡುತ್ತಿದ್ದಾಗ ಅವರ ಸಲಹೆಗಳು ನೆರವಿಗೆ ಬಂತು ಎಂದು ಶಾರ್ದೂಲ್ ಹೇಳಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲೇ ಸೋಲು ಕೊಂಚ ನಿರಾಸೆ ಮೂಡಿಸಿತ್ತು, ಆದರೆ ಆ ಬಳಿಕ ತಂಡ ಕಮ್ ಬ್ಯಾಕ್ ಮಾಡಿದ್ದು, ಟೂರ್ನಿಯ ಉಳಿದ ಪಂದ್ಯಗಳಲ್ಲೂ ಇದೇ ಪ್ರದರ್ಶನ ಮುಂದುವರೆಯಲಿದೆ ಎಂದು ಶಾರ್ದೂಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com