ಚೆಂಡು ವಿರೂಪಗೊಳಿಸಿದ ಪ್ರಕರಣ: ಆಸಿಸ್ ಕೋಚ್ ಲೆಹ್ಮನ್ ಹುದ್ದೆ ಉಳಿಸಿದ ಆ 6 ಶಬ್ದಗಳು!

ತಂಡದ ಕೋಚ್ ಡಾರೆನ್ ಲೆಹ್ಮನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿಬರುತ್ತಿರುವ ಹೊತ್ತಿನಲ್ಲೇ ಘಟನೆ ನಡೆಯುತ್ತಿದ್ದ ವೇಳೆ ಕೋಚ್ ಲೆಹ್ಮನ್ ಹೇಳಿದ್ದ ಆ ಆರು ಶಬ್ದಗಳು ಇದೀಗ ಅವರ ಸ್ಥಾನವನ್ನುರಕ್ಷಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಆಟಗಾರರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದ್ದು, ತಂಡದ ಕೋಚ್ ಡಾರೆನ್ ಲೆಹ್ಮನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿಬರುತ್ತಿರುವ ಹೊತ್ತಿನಲ್ಲೇ ಘಟನೆ ನಡೆಯುತ್ತಿದ್ದ ವೇಳೆ ಕೋಚ್ ಲೆಹ್ಮನ್ ಹೇಳಿದ್ದ ಆ ಆರು ಶಬ್ದಗಳು ಇದೀಗ ಅವರ ಸ್ಥಾನವನ್ನುರಕ್ಷಿಸಿದೆ.
ಹೌದು...ಕೋಚ್ ಸ್ಖಾನಕ್ಕೆ ಲೆಹ್ಮನ್ ರಾಜಿನಾಮೆ ನೀಡಿದ್ದಾಗ ಕ್ರಿಕೆಟ್ ಆಸ್ಟ್ರೇಲಿಯಾ ಅವರಿಗೆ ಕ್ಲೀನ್​ಚಿಟ್ ನೀಡಿದ್ದು ಎಲ್ಲರ ಹುಬ್ಬೇರಿಸಿತ್ತು. ಆದರೆ, ತನಿಖೆಯ ವೇಳೆ ಲೆಹ್ಮನ್​ರ ವಾದವನ್ನು ಇಂಟಿಗ್ರಿಟಿ ಯೂನಿಟ್ (ತನಿಖಾ ತಂಡ) ಒಪ್ಪಿಕೊಂಡಿದ್ದರಿಂದ ಅವರಿಗೆ ಕೋಚ್ ಆಗಿ ಮುಂದುವರಿಯಲು ಅವಕಾಶ ನೀಡಲಾಗಿದೆ. 
ಟಿವಿ ನೇರಪ್ರಸಾರದಲ್ಲಿ ಲೆಹ್ಮನ್, 12ನೇ ಆಟಗಾರ ಹ್ಯಾಂಡ್ಸ್​ಕಾಂಬ್​ಗೆ ವಾಕಿಟಾಕಿಯಲ್ಲಿ ಸೂಚನೆ ನೀಡಿದ್ದು ಸ್ಪಷ್ಟವಾಗಿತ್ತು. ಬಳಿಕ ಹ್ಯಾಂಡ್ಸ್​ಕಾಂಬ್, ಬ್ಯಾಂಕ್ರಾಫ್ಟ್​ರ ಜತೆ ಮೈದಾನದಲ್ಲಿ ಮಾತನಾಡಿದ್ದು ಪ್ರಸಾರಗೊಂಡಿತ್ತು. ಬ್ಯಾಂಕ್ರಾಫ್ಟ್ ಕೈಯಲ್ಲಿ ಏನೋ ಹಿಡಿದುಕೊಂಡಿದ್ದು, ಅದನ್ನು ಪ್ರಶ್ನಿಸುವಂತೆ ‘ವಾಟ್ ಈಸ್ ದ ಹೆಲ್ ಗೋಯಿಂಗ್ ಆನ್’ ಎಂದು ಲೆಹ್ಮನ್ ವಾಕಿಟಾಕಿ ಮೂಲಕ ಹ್ಯಾಂಡ್ಸ್​ಕಾಂಬ್​ಗೆ ಹೇಳಿದ್ದಾರೆ. ಬಳಿಕ ಹ್ಯಾಂಡ್ಸ್​ಕೊಂಬ್, ಬ್ಯಾಂಕ್ರಾಫ್ಟ್ ರಲ್ಲಿ ಈ ವಿಷಯವನ್ನು ಕೇಳಿದ್ದರು ಎಂದು ಸಿಇಒ ಜೇಮ್ಸ್ ಸುದರ್​ಲ್ಯಾಂಡ್ ತಿಳಿಸಿದ್ದಾರೆ. 
ಇಂಟಿಗ್ರಿಟಿ ಯೂನಿಟ್​ನ ಮುಖ್ಯಸ್ಥ ಇಯಾನ್ ರಾಯರ್ ತನಿಖೆಯ ವೇಳೆಯೂ ಲೆಹ್ಮನ್ ಇದನ್ನು ಹೇಳಿರುವ ಕಾರಣ ಅವರಿಗೆ ಕ್ಲೀನ್​ಚಿಟ್ ನೀಡಲಾಗಿದೆ. ಲೆಹ್ಮನ್ ‘ಹೆಲ್’ ಬದಲಾಗಿ ಬೇರೆ ಶಬ್ದವನ್ನು ಬಳಸಿದ್ದರಷ್ಟೇ ಎಂದು ಸುದರ್​ ಲ್ಯಾಂಡ್ ಸ್ಪಷ್ಟಪಡಿಸಿದ್ದಾರೆ. ಈ ಆರು ಶಬ್ದಗಳೇ ಲೆಹ್ಮನ್​ರನ್ನು ವಜಾ ಶಿಕ್ಷೆಯಿಂದ ಬಚಾವ್ ಮಾಡಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com