ಐಪಿಎಲ್ 2018: 2 ಪ್ಲೇ ಆಫ್ ಪಂದ್ಯ ಪುಣೆಯಿಂದ ಕೊಲ್ಕತ್ತಾಗೆ ಶಿಫ್ಟ್!

2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಎರಡು ಪ್ಲೇ ಆಫ್ ಪಂದ್ಯಗಳನ್ನು ಪುಣೆಯಿಂದ ಕೋಲ್ಕತ್ತಾಗೆ ಶಿಫ್ಟ್ ಮಾಡಲಾಗಿದೆ...
ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್
ಪುಣೆ: 2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಎರಡು ಪ್ಲೇ ಆಫ್ ಪಂದ್ಯಗಳನ್ನು ಪುಣೆಯಿಂದ ಕೋಲ್ಕತ್ತಾಗೆ ಶಿಫ್ಟ್ ಮಾಡಲಾಗಿದೆ. 
ಎರಡು ಪ್ಲೇ ಆಫ್ ಪಂದ್ಯಗಳು ಮೇ 23ರಂದು ಎಲಿಮಿನೇಟರ್ ಪಂದ್ಯ ಹಾಗೂ ಮೇ 25ರಂದು ಕ್ವಾಲಿಫೈಯರ್-2 ಪಂದ್ಯಗಳು ಪುಣೆಯಲ್ಲಿ ನಡೆಯಬೇಕಿತ್ತು. ಆದರೆ ಪಂದ್ಯಗಳು ಪುಣೆಯಿಂದ ಕೋಲ್ಕತ್ತಾಗೆ ಶಿಫ್ಟ್ ಮಾಡಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಮುಖ್ಯಸ್ಥ ರಾಜೀವ್ ಶುಕ್ಲಾ ಹೇಳಿದ್ದಾರೆ. 
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಚೆನ್ನೈನಲ್ಲಿ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳನ್ನು ಪುಣೆಗೆ ಶಿಫ್ಟ್ ಮಾಡಲಾಗಿತ್ತು. 
ಇನ್ನು ಎರಡು ಪ್ಲೇ ಆಫ್ ಪಂದ್ಯಗಳನ್ನು ಆಯೋಜಿಸಲು ಸಂತೋಷಿಸುತ್ತೇವೆ ಎಂದು ಬೆಂಗಾಲ್ ಕ್ರಿಕೆಟ್ ಅಸೋಸಿಯೇಶನ್ ನ ಜಂಟಿ ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com