ಇಂದೋರ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಇಂದೋರ್ ನ ಹೊಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿತ್ತು.
ಪಂಜಾಬ್ ನೀಡಿದ 175 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಸೂರ್ಯಕುಮಾರ್ ಯಾದವ್ ಅರ್ಧ ಶತಕ ನೆರವಿನಿಂದ ತಂಡ ಗೆಲುವಿನ ನಗೆ ಬೀರಿತು.
ಪಂಜಾಬ್ ಪರ ಕೆಎಲ್ ರಾಹುಲ್ 24, ಕ್ರಿಸ್ ಗೇಯ್ಲ್ 50, ಕರುಣ್ ನಾಯರ್ 23, ಸ್ಟೋನಿಸ್ 29 ರನ್ ಬಾರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 57, ಇಶಾನ್ ಕಿಶನ್ 25, ಹಾರ್ದಿಕ್ ಪಾಂಡ್ಯ 23, ರೋಹಿತ್ ಶರ್ಮಾ 24 ಮತ್ತು ಕೃನಾಲ್ ಪಾಂಡ್ಯ 31 ರನ್ ಬಾರಿಸಿದ್ದಾರೆ.