ಚೆನ್ನೈ 'ಸೂಪರ್ ಕಿಂಗ್ಸ್': 11 ವರ್ಷ, 7 ಬಾರಿ ಫೈನಲ್ ಪ್ರವೇಶ, 3 ಬಾರಿ ಚಾಂಪಿಯನ್, 4 ಬಾರಿ ರನ್ನರ್ ಅಪ್

ಐಪಿಎಲ್ ನಿಂದ ನಿಷೇಧಕ್ಕೆ ಒಳಗಾಗಿ ಪ್ರಶಸ್ತಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿಯಾಗಿ ಐಪಿಎಲ್ ಟೂರ್ನಿಗೆ ಕಮ್ ಬ್ಯಾಕ್ ಮಾಡಿದ್ದು, 3ನೇ ಬಾರಿಗೆ ಪ್ರಶಸ್ತಿ ಜಯಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಐಪಿಎಲ್ ನಿಂದ ನಿಷೇಧಕ್ಕೆ ಒಳಗಾಗಿ ಪ್ರಶಸ್ತಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿಯಾಗಿ ಐಪಿಎಲ್ ಟೂರ್ನಿಗೆ ಕಮ್ ಬ್ಯಾಕ್ ಮಾಡಿದ್ದು, 3ನೇ ಬಾರಿಗೆ ಪ್ರಶಸ್ತಿ ಜಯಿಸಿದೆ.
2008ರಲ್ಲಿ ಆರಂಭಗೊಂಡ ಐಪಿಎಲ್ ಟೂರ್ನಿ ಒಟ್ಟು 11 ಸೀಸನ್ ಗಳನ್ನು ಪೂರ್ಣಗೊಳಿಸಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬರೊಬ್ಬರಿ 7 ಬಾರಿ ಪೈನಲ್ ಪ್ರವೇಶ ಮಾಡುವ ಮೂಲಕ ನೂತನ ಇತಿಹಾಸ ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಬಾರಿ ಫೈನಲ್ ಪ್ರವೇಶ ಮಾಡಿರುವ ತಂಡ ಎಂಬ ಖ್ಯಾತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾಜನವಾಗಿದೆ. ಈ ಹಿಂದೆಯೂ ಕೂಡ ಇದೇ ದಾಖಲೆ ಚೆನ್ನೈ ಹೆಸರಿನಲ್ಲಿತ್ತು. ಇದೀಗ ತನ್ನದೇ ದಾಖಲೆಯನ್ನು ಚೆನ್ನೈ ಉತ್ತಮ ಪಡಿಸಿಕೊಂಡಿದೆ.
11 ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಟ್ಟು 7 ಬಾರಿ ಫೈನಲ್ ಪ್ರವೇಶ ಮಾಡಿದ್ದು, ಈ ಪೈಕಿ 3 ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದೆ. ಅಂತೆಯೇ 4 ಬಾರಿ ರನ್ನರ್ ಅಪ್ ಆಗಿದೆ. ಇನ್ನು ಅತೀ ಹೆಚ್ಚು ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದ ತಂಡಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಮುಂಬೈ ತಂಡ ಒಟ್ಟು 4 ಬಾರಿ ಫೈನಲ್ ಪ್ರವೇಶ ಮಾಡಿದ್ದು, ಈ ಪೈಕಿ 3 ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದೆ. ಒಮ್ಮೆ ಮಾತ್ರ ರನ್ನರ್ ಅಪ್ ಆಗಿದೆ.
ಇನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ 3 ಬಾರಿ ಫೈನಲ್ ಪ್ರವೇಶ ಮಾಡಿ, ಮೂರು ಬಾರಿಯೂ ರನ್ನರ್ ಅಪ್ ಆಗಿ ನಿರಾಶೆ ಅನುಭವಿಸಿದೆ. ಅಂತೆಯೇ ಹೈದರಬಾದ್ ತಂಡ ಕೂಡ ಮೂರು ಬಾರಿ ಫೈನಲ್ ಪ್ರವೇಶ ಮಾಡಿದ್ದು, ಈ ಪೈಕಿ 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಆಗಿ ಮತ್ತು 2016, 2018ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಆಗಿ ಫೈನಲ್ ಪ್ರವೇಶ ಮಾಡಿತ್ತು. ಉಳಿದಂತೆ ಕೋಲ್ಕತಾ ನೈಟ್ ರೈಡರ್ಸ್ ಎರಡು ಬಾರಿ ಫೈನಲ್ ಪ್ರವೇಶ ಮಾಡಿ 1 ಬಾರಿ ಪ್ರಶಸ್ತಿ ಪಡೆದಿತ್ತು. ಅಂತೆಯೇ ರಾಜಸ್ಥಾನ ರಾಯಲ್ಸ್ ತಂಡ ಒಮ್ಮೆ ಪೈನಲ್ ಪ್ರವೇಶ ಮಾಡಿ ಅದೇ ಸರಣಿಯಲ್ಲಿ ಪ್ರಶಸ್ತಿ ಕೂಡ ಪಡೆದಿತ್ತು.
ಕಿಂಗ್ಸ್ ಇಲೆವನ್ ಪಂಜಾಬ್ ಕೂಡ ಒಮ್ಮೆ ಪೈನಲ್ ಪ್ರವೇಶ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com