ವಿಡಿಯೋ: ಒಂದೇ ಓವರ್‌ನಲ್ಲಿ 43 ರನ್ ಸಿಡಿಸಿದ ದಾಂಡಿಗರು; ಕ್ರಿಕೆಟ್ ಇತಿಹಾಸದಲ್ಲೇ ಸೃಷ್ಟಿಯಾಯ್ತು ವಿಶ್ವದಾಖಲೆ!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಒಂದೇ ಓವರ್ ನಲ್ಲಿ 6 ಸಿಕ್ಸ್ ಬಾರಿಸುವ ಮೂಲಕ 36 ರನ್ ಗಳಿಸಿದ ದಾಖಲೆ ಬರೆದಿದ್ದರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಒಂದೇ ಓವರ್ ನಲ್ಲಿ 6 ಸಿಕ್ಸ್ ಬಾರಿಸುವ ಮೂಲಕ 36 ರನ್ ಗಳಿಸಿದ ದಾಖಲೆ ಬರೆದಿದ್ದರು. ಇದೀಗ ಒಂದೇ ಓವರ್ನಲ್ಲಿ 43 ರನ್ ಸಿಡಿಸುವ ಮೂಲಕ ಬ್ಯಾಟ್ಸ್‌ಮನ್‌ಗಳಿಬ್ಬರು ವಿಶ್ವ ದಾಖಲೆ ಬರೆದಿದ್ದಾರೆ. 
ನ್ಯೂಜಿಲೆಂಡ್ ಲಿಸ್ಟ್ ಎ ಕ್ರಿಕೆಟ್ ನ ದಿ ಫೋರ್ಡ್ ಟ್ರೋಫಿಯಲ್ಲಿ ಈ ದಾಖಲೆಯಾಗಿದ್ದು ನಾರ್ಥನ್ ಡಿಸ್ಟ್ರಿಕ್ಟ್ ತಂಡದ ಜೋ ಕಾರ್ಟನ್ ಹಾಗೂ ಬ್ರೆಟ್ ಹ್ಯಾಂಪ್ಟನ್ ಒಂದು ಓವರ್ ನಲ್ಲಿ 43 ರನ್ ಬಾರಿಸಿದ ದಾಂಡಿಗರು. 
ಇನ್ನು ವಿಲಿಯನ್ ಲ್ಯೂಡಿಕ್ ಒಂದು ಓವರ್ ನಲ್ಲಿ 43 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. 
ಒಂದು ಓವರ್ ನಲ್ಲಿ ಬಂದ ರನ್ ವಿವರ: ( 4, 6+nb, 6+nb, 6, 1, 6, 6, 6= 43 ) 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com