ಕ್ಯಾಚ್ ಹಿಡಿಯಲು ಬಂದ ಬುಮ್ರಾರನ್ನು ಹೆದರಿಸಿದ ಪೊಲಾರ್ಡ್, ರೋಹಿತ್ ಆಕ್ರೋಶ, ವಿಡಿಯೋ ವೈರಲ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 71 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಇನ್ನು ಪಂದ್ಯದ ವೇಳೆ ವಿಂಡೀಸ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 71 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಇನ್ನು ಪಂದ್ಯದ ವೇಳೆ ವಿಂಡೀಸ್ ತಂಡದ ಆಟಗಾರ ಕೀರನ್ ಪೊಲಾರ್ಡ್ ವರ್ತನೆ ಇದೀಗ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 
ಲಖನೌನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ತಂಡದ ಪರ 11 ಓವರ್ ನ 4ನೇ ಎಸೆತವನ್ನು ಎದುರಿಸಿದ ಪೊಲಾರ್ಡ್ ಬಿರುಸಿನ ಹೊಡೆತಕ್ಕೆ ಮುಂದಾದರು. ಆದರೆ ಚೆಂಡು ಬ್ಯಾಟ್ ನ ತುದಿಗೆ ತಗುಲಿ ಬ್ಯಾಟ್ಸ್ ಮನ್ ಪಕ್ಕದಲ್ಲೇ ಮೇಲಕ್ಕೆ ಚಿಮ್ಮಿತು. ಕ್ಯಾಚ್ ಹಿಡಿಯಲು ಓಡಿ ಬರುತ್ತಿದ್ದ ಬುಮ್ರಾರನ್ನು ಕಂಡ ಪೊಲಾರ್ಡ್ ಹೆದರಿಸಿ ಕ್ಯಾಚ್ ಮಿಸ್ ಮಾಡುವಂತೆ ಮಾಡಲು ಮುಂದಾದರು. ಆದರೆ ಧೃತಿಗೆಡದ ಬುಮ್ರಾ ಕ್ಯಾಚ್ ಹಿಡಿದು ಔಟ್ ಮಾಡಿದರು. 
ಆದರೆ ಕೀರನ್ ಪೊಲಾರ್ಡ್ ವರ್ತನೆ ಇದೀಗ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಪೊಲಾರ್ಡ್ ನಡೆಯ ವಿರುದ್ಧ ಮೈದಾನದ ಅಂಪೈರ್ ಬಳಿ ಚರ್ಚಿಸಿದರು. ಬುಮ್ರಾ ಕ್ಯಾಚ್ ಹಿಡಿದಿದ್ದರಿಂದ ಅಂಪೈರ್ ಸಹ ಸುಮ್ಮನಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com