ನ್ಯೂಜಿಲ್ಯಾಂಡ್ ಎಡವಟ್ಟು; ಪಾಕ್ ಬ್ಯಾಟ್ಸ್‌ಮನ್‌ಗಳು ಓಡಿದ್ದೇ ಓಡಿದ್ದು, ಈ ವಿಡಿಯೋ ನೋಡಿದ್ರೆ ಖಂಡಿತ ನಗ್ತೀರಾ!

ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಪಾಕ್ ಆಟಗಾರರು ಒಂದು ಎಸೆತದಲ್ಲಿ ಐದು ರನ್ ಓಡಿ ಅಚ್ಚರಿ ಮೂಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ದುಬೈ: ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಪಾಕ್ ಆಟಗಾರರು ಒಂದು ಎಸೆತದಲ್ಲಿ ಐದು ರನ್ ಓಡಿ ಅಚ್ಚರಿ ಮೂಡಿಸಿದ್ದಾರೆ. 
ನ್ಯೂಜಿಲ್ಯಾಂಡ್ ತಂಡದ ಕಳಪೆ ಕ್ಷೇತ್ರ ರಕ್ಷಣೆಯಿಂದ ಪಾಕಿಸ್ತಾನ ಆಟಗಾರರಾದ ಫಹೀಮ್ ಅಶ್ರಫ್ ಹಾಗೂ ಆಸಿಫ್ ಅಲಿ ಬ್ಯಾಟ್ ಮಾಡುತ್ತಿದ್ದ ವೇಳೆ ಈ ಅಪರೂಪದ ಘಟನೆ ನಡೆದಿದೆ. 
ವೇಗಿ ಟ್ರೆಂಟ್ ಬೌಲ್ಟ್ ಎಸೆತವನ್ನು ಪಾಕ್ ಆಟಗಾರ ಫಹೀಮ್ ಫ್ಲಿಕ್ ಮಾಡಿದ್ದು ಚೆಂಡು ಡೀಪ್ ಸ್ಕೈರ್ ಲೆಗ್ ನತ್ತ ತೆರಳಿದೆ. ಅಲ್ಲಿದ್ದ ಫೀಲ್ಡರ್ ಚೆಂಡನ್ನು ಕೀಪರ್ ನತ್ತ ಎಸೆದಿದ್ದಾನೆ. ಚೆಂಡನ್ನು ಹಿಡಿದ ಕೀಪರ್ ಅದನ್ನು ಬೌಲರ್ ಎಂಡ್ ನ ವಿಕೆಟ್ ಗೆ ಎಸೆದಿದ್ದಾನೆ. 
ಆದರೆ ಚೆಂಡು ವಿಕೆಟ್ ಗೆ ತಾಗದೆ ಮುಂದಕ್ಕೆ ಹೋಗಿದೆ. ಅಷ್ಟರಲ್ಲೇ ಪಾಕ್ ಆಟಗಾರರು ಮೂರು ರನ್ ಗಳಿಸಿದ್ದರು. ವಿಕೆಟ್ ಗೆ ತಾಗದೇ ಮುಂದೆ ಹೋದಾಗ ಮತ್ತೆ ಒಂದು ರನ್ ಓಡಿದ್ದಾರೆ. ಫೀಲ್ಡರ್ ಮತ್ತೆ ಚೆಂಡನ್ನು ವಿಕೆಟ್ ಕೀಪರ್ ಗೆ ಎಸೆದಿದ್ದಾನೆ. ಕೀಪರ್ ಆ ಚೆಂಡನ್ನು ಹಿಡಿಯುವಲ್ಲಿ ವಿಫಲರಾಗಿದ್ದು ಮತ್ತೆ ಪಾಕ್ ಆಟಗಾರರು ಒಂದು ರನ್ ಓಡಿ ಒಟ್ಟು 5 ರನ್ ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com