ಗಯಾನ: ಮಹಿಳಾ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲ್ಯಾಂಡ್ ಆಟಗಾರ್ತಿ ಸೂಜಿ ಬೇಟ್ಸ್ ಅದ್ಭುತ ಕ್ಯಾಚ್ ಹಿಡಿಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಗಾರ್ಡ್ನರ್ ಲಾಂಗ್ ಆನ್ ನಲ್ಲಿ ಸಿಕ್ಸರ್ ಹೊಡೆಯಲು ಯತ್ನಿಸಿದರು. ಆದರೆ ಲಾಂಗ್ ನಲ್ಲಿದ್ದ ಬೇಟ್ಸ್ ಎದ್ದು ಬಿದ್ದು ಕೊನೆಗೂ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.
ಈ ಕ್ಯಾಚ್ ಹಿಡಿಯುವ ಮುನ್ನ ಬೇಟ್ಸ್ ಕೈಯಿಂದ ಚೆಂಡು ಎರಡು ಬಾರಿ ಜಾರಿತ್ತು. ಆದರೂ ಪ್ರಯತ್ನ ಬಿಡದ ಬೇಟ್ಸ್ ಮೂರನೇ ಬಾರಿಗೆ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಸದ್ಯ ಬೇಟ್ಸ್ ಹಿಡಿದಿರುವ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆಸೀಸ್ ವಿರುದ್ಧ 33 ರನ್ ಗಳಿಂದ ಸೋಲು ಅನುಭವಿಸಿದೆ.