ಐಸಿಸಿ ಮಹಿಳಾ ವಿಶ್ವ ಟಿ20 ಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 48 ರನ್ ಗಳ ಜಯ ದಾಖಲಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಮೂಲಕ ಸತತ ಮೂರು ಗೆಲುವುಗಳನ್ನು ದಕ್ಕಿಸಿಕೊಂಡಿರುವ ಭಾರತ ’ಗ್ರೂಪ್ ಬಿ’ಯಲ್ಲಿ ಅಗ್ರ ಶ್ರೇಣಿಗೆ ತಲುಪುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 8 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾಗೆ 167 ರನ್ ಗಳ ಗುರಿ ನೀಡಿತ್ತು. ಬೌಲಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 119 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಭಾರತದ ಪರ ಸ್ಮೃತಿ ಮಂಧನಾ 55 ಎಸೆತಗಳಲ್ಲಿ 83 ರನ್ ದಾಖಲಿಸಿದರೆ ನಾಯಕಿ ಹರ್ಮನ್ ಪ್ರೀತ್ ಕೌರ್ 43 ರನ್ ಗಳಿಸಿದ್ದರು.