ಬಿಹಾರ-ಮುಂಬೈ ನಡುವೆ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದ್ದು, ಅಭಿಮಾನಿಯೊಬ್ಬ ಕ್ರೀಸ್ ನತ್ತ ಧಾವಿಸಿ ಬಂದು ರೋಹಿತ್ ಶರ್ಮಾ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾನೆ, ಅಷ್ಟೇ ಅಲ್ಲದೇ ರೋಹಿತ್ ಗೆ ಮುತ್ತು ಕೊಡಲು ಯತ್ನಿಸಿದ್ದಾನೆ. ಈ ಘಟನೆಯಿಂದ ರೋಹಿತ್ ಶರ್ಮಾ ಕೆಲಕಾಲ ಗೊಂದಲಕ್ಕೀಡಾಗಿದ್ದರು.