ವೆಸ್ಟ್ ಇಂಡೀಸ್- ಭಾರತ ನಡುವಿನ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತದಿಂದ ಫೀಲ್ಡಿಂಗ್ ಆಯ್ಕೆ

ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡಿಸ್ ತಂಡವನ್ನು ವೈಟ್ ವಾಷ್ ಮಾಡಿರುವ ಭಾರತ ತಂಡ, ಏಕದಿನ ಸರಣಿಯಲ್ಲೂ ಪ್ರಾಬಲ್ಯ ಮೆರೆಯುವ ಆತ್ಮವಿಶ್ವಾಸದೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ.
ವೆಸ್ಟ್ ಇಂಡೀಸ್- ಭಾರತ ನಡುವಿನ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತದಿಂದ ಫೀಲ್ಡಿಂಗ್ ಆಯ್ಕೆ
ವೆಸ್ಟ್ ಇಂಡೀಸ್- ಭಾರತ ನಡುವಿನ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತದಿಂದ ಫೀಲ್ಡಿಂಗ್ ಆಯ್ಕೆ
ಗುವಾಹಟಿ: ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡಿಸ್ ತಂಡವನ್ನು ವೈಟ್ ವಾಷ್ ಮಾಡಿರುವ ಭಾರತ ತಂಡ, ಏಕದಿನ ಸರಣಿಯಲ್ಲೂ ಪ್ರಾಬಲ್ಯ ಮೆರೆಯುವ ಆತ್ಮವಿಶ್ವಾಸದೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. 
ಅ.21 ರಂದು ಗುವಾಹಟಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.  ತವರಿನಲ್ಲಿ ಒಟ್ಟಾರೆ ಆಡಿರುವ 9 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಭಾರತ ಗೆದ್ದಿದ್ದು, ವೆಸ್ಟ್ ಇಂಡೀಸ್ 2 ಪಂದ್ಯಗಳನ್ನು ಗೆದ್ದಿದ್ದರೆ ಇನ್ನು 2  ಪಂದ್ಯಗಳು ರದ್ದುಗೊಂಡಿದ್ದವು. 
ಭಾರತದ ಬ್ಯಾಟಿಂಗ್ ಲೇನ್ ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಆಧಾರವಾಗಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಎಂಎಸ್ ಧೋನಿ, ರವೀಂದ್ರ ಜಡೇಜಾ, ರಿಷಭ್ ಪಂತ್ ಇರಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com