ಟೀಂ ಇಂಡಿಯಾ ತಂಡದ ಪ್ರತಿನಿಧಿಗಳು ತಂಡದ ಅವಲೋಕನ ಸಭೆಯಲ್ಲಿ ಬೇಡಿಕೆ ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಪಟ್ಟಿಯಲ್ಲಿ ವಿಶ್ವಕಪ್ ಪಂದ್ಯಗಳನ್ನಾಡಲು ಹೋಗುವಾಗ ಜತೆಗೆ ಪತ್ನಿಯನ್ನೂ ಕರೆದುಕೊಂಡು ಹೋಗಲು ಅನುಮತಿ ನೀಡಬೇಕು. ಇಂಗ್ಲೆಂಡ್ ನಲ್ಲಿ ಪ್ರಯಾಣಿಸಲು ಕಾಯ್ದಿರಿಸಿದ ರೈಲ್ವೆ ಬೋಗಿಗಳು ಬೇಕು. ಕ್ರೀಡಾಪಟುಗಳಿಗೆ ತಿನ್ನಲು ಬಾಳೆಹಣ್ಣು ಮತ್ತು ತಂಗಲು ಜಿಮ್ ಇರುವ ಹೋಟೆಲ್ ಗಳು ಬೇಕು. ಇವೆ ಪಟ್ಟಿಯಲ್ಲಿರುವ ಪ್ರಧಾನ ಬೇಡಿಕೆಗಳು.