ಜಾಕ್ ವೆದರ್ ಲ್ಯಾಂಡ್
ಕ್ರಿಕೆಟ್
ಹಿಟ್ ವಿಕೆಟ್ ಆದ ರೀತಿಗೆ ಕಕ್ಕಾಬಿಕ್ಕಿಯಾದ ಬ್ಯಾಟ್ಸ್‌ಮನ್, ವಿಡಿಯೋ ನೋಡಿದ್ರೆ ನೀವು ನಗ್ತೀರಾ!
ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಸಹ ನಾವು ಅಂದುಕೊಳ್ಳದ ರೀತಿ ವಿಚಿತ್ರ ಔಟ್ ಗಳು ದಾಖಲಾಗುತ್ತವೆ...
ಮೆಲ್ಬೋರ್ನ್: ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಸಹ ನಾವು ಅಂದುಕೊಳ್ಳದ ರೀತಿ ವಿಚಿತ್ರ ಔಟ್ ಗಳು ದಾಖಲಾಗುತ್ತವೆ.
ಇಲ್ಲೊಬ್ಬ ಬ್ಯಾಟ್ಸ್ ಮನ್ ತನಗೆ ಗೊತ್ತಿಲ್ಲದಂತೆ ವೇಗವಾಗಿ ಬಂದ ಬೌಲ್ ಎದುರಿಸಲು ಹೋಗಿ ಬ್ಯಾಟ್ ಕೈ ಬಿಟ್ಟಿದ್ದಾರೆ. ಬ್ಯಾಟ್ ತಲೆಯ ಮೇಲಿನಿಂದ ಹಾರಿ ಬೆಲ್ಸ್ ಮೇಲೆ ಬಿದ್ದು ಹಿಟ್ ವಿಕೆಟ್ ಆಗಿದ್ದಾನೆ.
ಅಚಾನಕ್ ಆಗಿ ನಡೆದ ಘಟನೆಯಿಂದ ಬ್ಯಾಟ್ಸ್ ಮನ್ ಕೆಲ ಸಮಯ ದಿಗ್ಬ್ರಾಂತನಾಗಿ ನಿಂತು ಇದು ಹೇಗೆ ನಡೆಯಿತು ಎಂದು ಒಂದು ಕ್ಷಣ ಯೋಜನೆ ಮಾಡುತ್ತಾ ನಿಂತಿದ್ದಾನೆ.
ಆಸ್ಟ್ರೇಲಿಯಾದ ಎನ್ಪಿಎಸ್ ಹಾಗೂ ವಿಕ್ಟೋರಿಯಾ ತಂಡಗಳ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯನ್ ಬ್ಯಾಟ್ಸ್ ಮನ್ ಜಾಕ್ ವೆದರ್ ಲ್ಯಾಂಡ್ ಈ ಹಿಟ್ ವಿಕೆಟ್ ಒಳಗಾದ ಆಟಗಾರ.
ಈ ಅಚ್ಚರಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಗಿದ್ದು ಭಾರೀ ಸದ್ದು ಮಾಡುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಈ ವಿಡಿಯೋವನ್ನು ತನ್ನ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಅಪ್ ಲೋಡ್ ಮಾಡಿದೆ.
Oh dear... Have a look at Jake Weatherald's bizarre dismissal in yesterday's practice match between the NPS and Victoria
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ