ಭಾರತ-ಪಾಕ್ ನಡುವೆ ಹೆಚ್ಚು ಸಂಖ್ಯೆಯ ಪಂದ್ಯ ನಡೆಯಬೇಕು: ಶೋಯೆಬ್ ಮಲಿಕ್
ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳ ಸಂಬಂಧ ಸುಧಾರಿಸುವಂತೆ ಎರಡೂ ರಾಷ್ಟಗಳ ನಡುವೆ ಹೆಚ್ಚು ಕ್ರಿಕೆಟ್ ಪಂದ್ಯಗಳನ್ನಾಡಬೇಕು ಕು ಎಂದು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಹೇಳಿದ್ದಾರೆ.
ಲಾಹೋರ್: ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳ ಸಂಬಂಧ ಸುಧಾರಿಸುವಂತೆ ಎರಡೂ ರಾಷ್ಟಗಳ ನಡುವೆ ಹೆಚ್ಚು ಕ್ರಿಕೆಟ್ ಪಂದ್ಯಗಳನ್ನಾಡಬೇಕು ಕು ಎಂದು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಹೇಳಿದ್ದಾರೆ.
ಎರಡೂ ದೇಶಗಳ ಆಟಗಾರರು ಪರಸ್ಪರ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.ಕ್ರೀಡಾಂಗಣದಲ್ಲಿ ಸಹ ಬಹಳ ಮೈತ್ರಿಯಿಂದಿರಲಿದ್ದಾರೆ ಎಂದ ಶೋಯೆಬ್ "ಭಾರತ ಮತ್ತು ಪಾಕಿಸ್ತಾನ ಹೆಚ್ಚು ಹೆಚ್ಚು ಪಂದ್ಯಗಳನ್ನಾಡಿದಲ್ಲಿ ಇದರಿಂದ ಗರಿಷ್ಠ ಪ್ರಯೋಜನವಾಗಲಿದೆ. ಅದು ಎರಡು ದೇಶಗಳ ಜನರಿಗೆ ಮಾತ್ರವಲ್ಲ ವಿಶ್ವದೆಲ್ಲೆಡೆಯ ಕ್ರಿಕೆಟ್ ಪ್ರೇಮಿಗಳಿಗೆ ಅದ್ಭುತ ಮನರಂಜನೆಯನ್ನು ನಿಡಲಿದೆ" ಡಾನ್ ಡಾಟ್ ಕಾಂ ಗೆ ನೀಡಿದ ಹೇಳಿಕೆಯಲ್ಲಿ ಮಲಿಕ್ ಅಭಿಪ್ರಾಯಪಟ್ಟರು.
"ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟಿಗರು ವೃತ್ತಿಪರರಾಗಿದ್ದು ಮೈದಾನದಲ್ಲಿ ಅವರುಗಳು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತಾರೆ. ಆದರೆ ನಾವು ಅಷ್ಟೇ ಸ್ನೇಹದಿಂದಿದ್ದು ಊಟವನ್ನು ಒಟ್ಟಿಗೆ ತೆಗೆದುಕೊಳ್ಳುತ್ತೇವೆ" ಎಂದು ಅವರು ಹೇಳಿದರು.
ಏಷ್ಯಾ ಕಪ್ ಪಂದ್ಯಾವಳಿಗೆ ಇನ್ನೇನು ಕೆಲವೇ ದಿನಗಳಿರುವಾಗ ಪಾಕಿಸ್ತಾನದ ಬಲಗೈ ಬ್ಯಾಟ್ಸ್ ಮನ್ ಮಲಿಕ್ ಭಾರತ-ಪಾಕ್ ಕ್ರಿಕೆಟ್ ಸಂಬಂಧ ವೃದ್ದಿ ಕುರಿತು ಮಾತನಾಡಿದ್ದಾರೆ.
"ಕ್ರಿಕೆಟಿಗರಾಗಿ, ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನದಲ್ಲಿ ಇಂತಹಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ದೇಶೀಯ ಕ್ರಿಕೆಟ್ ಟೂರ್ನಿಗಳಿಂದ, ಆಡಳಿತ ಮಂಡಳಿ ಸಹೋದ್ಯೋಗಿ ಅಧಿಕಾರಿ ಜತೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬೇಕು." ಎಂದಿದ್ದಾರೆ.
ಏಷ್ಯಾ ಕಪ್ ನಲ್ಲಿ ಭಾರತ-ಪಾಕ್ ಮುಖಾಮುಖಿಯ ಕುರಿತು ಹೇಳಿದ ಮಲಿಕ್ ಪಾಕ್ ತಂಡ ಯಾವ ಒತ್ತಡಕ್ಕೆ ಸಿಲುಕದೆ ಪಂದ್ಯವನ್ನಾಡಲಿದೆ ಎಂದು ಹೇಳಿದ್ದಾರೆ.
ಮುಂಬರುವ 2019 ರ ವಿಶ್ವ ಕಪ್ ತನ್ನ ಕೊನೆಯ ಏಕದಿನ ಪಂದ್ಯಾವಳಿಯಾಗಲಿದೆ ಎಂದು ತಿಳಿಸಿದ ಅವರು, 2020 ರ ವಿಶ್ವ ಟ್ವೆಂಟಿ-20 ಪಂದ್ಯದ ತನಕ ನಾನು ಟಿ-20 ಪಂದ್ಯವನ್ನಾಡುತ್ತೇನೆ ಎಂದರು.