ಗೆಲುವಿನ ಟ್ರ್ಯಾಕ್ ನಲ್ಲಿದ್ದ ಹಾಂಕಾಂಗ್ ಗೆ ಮುಳುವಾದ ವೇಗಿ ಖಲೀಲ್​ ಅಹ್ಮದ್​ ಯಾರು ಗೊತ್ತಾ?

ಏಷ್ಯಾ ಕಪ್ 2018 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಪ್ರಯಾಸದ ಗೆಲುವು ಸಾಧಿಸಿದೆ. ಅದೂ ಕೂಡ ಹಾಂಕಾಂಗ್ ನಂತಹ ಕ್ರಿಕೆಟ್ ಶಿಶು ಎದುರು ಭಾರತ ತಿಣುಕಾಡಿದ ರೀತಿ ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.
ಟೀಂ ಇಂಡಿಯಾ ಕ್ಯಾಪ್ ಪಡೆದು ಪದಾರ್ಪಣೆ ಮಾಡಿದ ಖಲೀಲ್
ಟೀಂ ಇಂಡಿಯಾ ಕ್ಯಾಪ್ ಪಡೆದು ಪದಾರ್ಪಣೆ ಮಾಡಿದ ಖಲೀಲ್
Updated on
ದುಬೈ: ಏಷ್ಯಾ ಕಪ್ 2018 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಪ್ರಯಾಸದ ಗೆಲುವು ಸಾಧಿಸಿದೆ. ಅದೂ ಕೂಡ ಹಾಂಕಾಂಗ್ ನಂತಹ ಕ್ರಿಕೆಟ್ ಶಿಶು ಎದುರು ಭಾರತ ತಿಣುಕಾಡಿದ ರೀತಿ ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.
ಆದರೆ ಈ ಹಂತದಲ್ಲಿ ಭಾರತ ತಂಡದ ನೆರವಿಗೆ ಬಂದಿದ್ದು ಮಾತ್ರ ಎಡಗೈ ವೇಗಿ ಖಲೀಲ್​ ಅಹ್ಮದ್. ಖಲೀಲ್ ಗೆ ಇದು ಪದಾರ್ಪಣೆ ಪಂದ್ಯವಾಗಿದ್ದು, ಪದಾರ್ಪಣೆ ಪಂದ್ಯದಲ್ಲೇ ಖಲೀಲ್ ತಮ್ಮ ತಾಕತ್ತು ಪ್ರದರ್ಶನ ಮಾಡಿದ್ದಾರೆ. ಆ ಮೂಲಕ ಭಾರತಕ್ಕಿದ್ದ ದೀರ್ಘಕಾಲದ ಎಡಗೈ ವೇಗಿಯ ಕೊರತೆಯನ್ನು ನೀಗಿಸುವ ಭರವಸೆ ಮೂಡಿಸಿದ್ದಾರೆ. ಈ ಮೂಲಕ 20 ವರ್ಷದ ಯುವ ಕ್ರಿಕೆಟಿಗ ಭಾರತದ ಪರ ಏಕದಿನ ಪಂದ್ಯವಾಡಿದ 222ನೇ ಆಟಗಾರ ಎನಿಸಿಕೊಂಡರು.
ಖಲೀಲ್​ ಅಹ್ಮದ್​ ಅವರನ್ನು ಏಷ್ಯಾಕಪ್ ಗೆ ಆಯ್ಕೆ ಮಾಡಿದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಅವರು ಹಾಂಕಾಂಗ್​ ವಿರುದ್ಧದ ಪಂದ್ಯದಲ್ಲಿ 11ರ ಬಳಗದಲ್ಲಿ ಸ್ಥಾನ ಪಡೆದು, ಪದಾರ್ಪಣೆ ಪಂದ್ಯದಲ್ಲೇ 3 ವಿಕೆಟ್​ ಪಡೆಯುವ ಮೂಲಕ ಭರವಸೆ ಮೂಡಿಸಿದ್ದಾರೆ. ಅಂಡರ್​-19 ತಂಡದ ಕೋಚ್​ ರಾಹುಲ್​ ದ್ರಾವಿಡ್​ ಅವರ ಗರಡಿಯಲ್ಲಿ ಖಲೀಲ್​ ಪಳಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬೌಲರ್​ ಆಗಿ ರೂಪುಗೊಳ್ಳುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. 
ಇವರ ಬಗ್ಗೆ ತಿಳಿಯಬೇಕಾದ ಪ್ರಮುಖಾಂಶಗಳು ಇಲ್ಲಿವೆ.
1. ರಾಜಸ್ಥಾನದ ಟೋಂಕ್​ ಜಿಲ್ಲೆಯಲ್ಲಿ ಹುಟ್ಟಿದ ಖಲೀಲ್ ಅಹ್ಮದ್ 2017ರ ಅಕ್ಟೋಬರ್​ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 2017ರ ಫೆಬ್ರವರಿಯಲ್ಲಿ ದೇಶೀಯ ಟಿ20 ಪಂದ್ಯಗಳಿಗೆ ಹಾಗೂ 2018ರ ಫೆಬ್ರವರಿಯಲ್ಲಿ ಲಿಸ್ಟ್​ ಎ ಪಂದ್ಯಗಳಿಗೆ ಪದಾರ್ಪಣೆ ಮಾಡಿದ್ದರು.
2. ಖಲೀಲ್​ ಅಹ್ಮದ್​ 2015-16ರ ಅಂಡರ್​-19 ವಿಶ್ವಕಪ್​ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದಲ್ಲಿ ಪಾಲ್ಗೊಂಡಿದ್ದರು, ಟೂರ್ನಿಯಲ್ಲಿ 6 ಪಂದ್ಯಗಳಿಂದ ಒಟ್ಟು 3 ವಿಕೆಟ್​ ಪಡೆದಿದ್ದರು.
3. ನಂತರ ಖಲೀಲ್​ ಅವರನ್ನು ಡೆಲ್ಲಿ ಡೇರ್​ಡೆವಿಲ್ಸ್​ ತಂಡ 10 ಲಕ್ಷ ಮೂಲ ಬೆಲೆಗೆ ಖರೀದಿಸಿತ್ತು. ಆದರೆ ಅವರು ಐಪಿಎಲ್​ನಲ್ಲಿ ಒಂದೂ ಪಂದ್ಯವನ್ನಾಡಿರಲಿಲ್ಲ.
4. 2018ರ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಖಲೀಲ್​ ತೀವ್ರ ಕುತೂಹಲ ಹುಟ್ಟು ಹಾಕಿದ್ದರು. ಇವರನ್ನು ಖರೀದಿಸಲು ಕಿಂಗ್ಸ್​ ಇಲವೆನ್​ ಪಂಜಾಬ್​, ಡೆಲ್ಲಿ ಡೇರ್​ ಡೆವಿಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಪೈಪೋಟಿ ನಡೆಸಿದ್ದವು. ಅಂತಿಮವಾಗಿ 3 ಕೋಟಿ ರೂ. ನೀಡಿ ಸನ್​ರೈಸರ್ಸ್​ ಹೈದರಾಬಾದ್​ ತಂಡ ಖಲೀಲ್ ರನ್ನು ಖರೀದಿಸಿತ್ತು. ಖಲೀಲ್​ ಕೇವಲ ಒಂದು ಪಂದ್ಯದಲ್ಲಿ ಹೈದರಾಬಾದ್​ ತಂಡದ ಪರ ಆಡಿದ್ದರು.
5. ಈ ವರ್ಷ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಿದ್ದ ಭಾರತ ಎ ತಂಡದಲ್ಲಿ ಖಲೀಲ್​ ಸ್ಥಾನ ಪಡೆದಿದ್ದರು. ಇಂಗ್ಲೆಂಡ್​ನಲ್ಲಿ ಒಟ್ಟು 3 ಪಂದ್ಯವನ್ನಾಡಿದ್ದ ಖಲೀಲ್​ 6 ವಿಕೆಟ್​ ಪಡೆದಿದ್ದರು. 2017-18ರ ವಿಜಯ್​ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಒಟ್ಟು 6 ಲಿಸ್ಟ್​ ಎ ಪಂದ್ಯಗಳಲ್ಲಿ 10 ವಿಕೆಟ್​ ಪಡೆದು ಮಿಂಚಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com