ದುಬೈ: ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ರ ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ಭಾರತೀಯ ಬೌಲರ್ ಗಳ ದಾಳಿಗೆ ನಲುಗಿದ ಪಾಕ್ 43.1 ಓವರ್‌ಗಳಲ್ಲಿ 162 ರನ್ ಗಳಿಸುವಷ್ಟರಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸರ್ವಪತನ ಕಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿದ್ದ ಪಾಕಿಸ್ತಾನಕ್ಕೆ ಪ್ರಾರಂಭದಲ್ಲೇ ಆಘಾತ ಎದುರಾಗಿದ್ದಿತು.ಪ್ರಾರಂಭದಲ್ಲಿ ಕಣಕ್ಕಿಳಿದಿದ್ದ ಇಮಾಮ್ ಉಲ್ ಹಾಕ್ (2) ಹಾಗೂ ಫಖಾರ್ ಜಮಾನ್ (0) ಅವರು ಬೇಗನೇ ವಿಕೆಟ್ ಒಪ್ಪಿಸಿದ್ದರು.
ಇದಾದ ಬಳಿಕ ಜತೆಯಾದ ಬಾಬರ್ ಅಜಾಮ್ ಹಾಗೂ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯಿಬ್ ಮಲಿಕ್ ಉತ್ತಮ ಪ್ರದರ್ಶನ ನಿಡಿ ಮೂರನೇ ವಿಕೆಟ್ ಗೆ 82 ರನ್ ಪೇರಿಸಿತ್ತು. ಆ ಬಳಿಕ ಬಂದ ಪಾಕ್ ನಾಯಕ ಸರ್ಫರಾಜ್ ಅಹ್ಮದ್ (6), ಮಲಿಕ್ ಒಂದು ಬೌಂಡರಿ ಹಾಗೂ ಸಿಕ್ಸರ್ ನೊಡನೆ 43 ರನ್ ಗಳಿಸಿ ಔಟಾದರು.
ಇದಾದ ಬಳಿಕ ಟೀಂ ಇಂಡಿಯಾ ಬೌಲರ್ ಗಳು ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದರು ಮಲಿಕ್ ನಿರ್ಗಮನ ಬಳಿಕ ಆಗಮಿಸಿದ ಆಸಿಫ್ ಅಲಿ (9), ಶದಬ್ ಖಾನ್ (8), ಫಾಹೀಂ ಅಶ್ರಫ್(21), ಮೊಹಮ್ಮದ್ ಆಮೀರ್ (18)ಹಸನ್ ಅಲಿ (1) ಹಾಗೂ ಉಸ್ಮಾನ್ ಖಾನ್ (0) ರನ್ ಗಳಿಸಿದ್ದರು.
ಭಾರತದ ಪರ ಭುವನೇಶ್ವರ್ ಕುಮಾರ್ ಹಾಗೂ ಕೇದರ್ ಜಾಧವ್ ತಲಾ 3, ಜಸ್ಪ್ರೀತ್ ಬುಮ್ರಾ 2 ಹಾಗೂ ಕುಲ್‌ದೀಪ್ ಯಾದವ್ 1 ವಿಕೆಟ್ ಪಡೆದು ಯಶಸ್ವಿ ಪ್ರದರ್ಶನ ನೀಡಿದ್ದಾರೆ.