ಶಿಖರ್ ಧವನ್ ಆತುರದಿಂದ ಪಾಕಿಸ್ತಾನ ವಿರುದ್ಧದ 'ಗೋಲ್ಡನ್ ರೆಕಾರ್ಡ್' ಮಿಸ್!

ಧವನ್ ಶತಕದ ನೆರವಿನಿಂದಾಗಿಯೇ ಭಾರತ ಭರ್ಜರಿ ಜಯ ಸಾಧಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಧವನ್ ಆತುರದಿಂದಾಗಿ ಭಾರತ ಪಾಕಿಸ್ತಾನದ ವಿರುದ್ಧ ಸಾಧಿಸಬಹುದಾಗಿದ್ದ ಅಪರೂಪದ ಗೋಲ್ಟನ್ ರೆಕಾರ್ಡ್ ಮಿಸ್ ಮಾಡಿಕೊಂಡಿದೆ.
ಶಿಖರ್ ಧವನ್
ಶಿಖರ್ ಧವನ್
ದುಬೈ: ಪಾಕಿಸ್ತಾನ ವಿರುದ್ಧ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅಕ್ಷರಶಃ ಆರ್ಭಟಿಸಿ ಬೊಬ್ಬಿರಿದಿದ್ದರು. ಅವರ ಶತಕದ ನೆರವಿನಿಂದಾಗಿಯೇ ಭಾರತ ಭರ್ಜರಿ ಜಯ ಸಾಧಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಧವನ್ ಆತುರದಿಂದಾಗಿ ಭಾರತ ಪಾಕಿಸ್ತಾನದ ವಿರುದ್ಧ ಸಾಧಿಸಬಹುದಾಗಿದ್ದ ಅಪರೂಪದ ಗೋಲ್ಟನ್ ರೆಕಾರ್ಡ್ ಮಿಸ್ ಮಾಡಿಕೊಂಡಿದೆ.
ಹೌದು.. ನಿನ್ನೆ ದುಬೈನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ 2018ರ ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತ್ತು. ಇದು ಈ ವರೆಗೂ ಪಾಕಿಸ್ತಾನದ ವಿರುದ್ಧ ಸಿಕ್ಕ ಜಯಗಳಲ್ಲೇ ಅತ್ಯಂತ ದೊಡ್ಡ ಗೆಲುವಾಗಿದೆಯಾದರೂ, ಕೊನೆಯ ಹಂತದಲ್ಲಿ ಶಿಖರ್ ಧವನ್ ರನೌಟ್ ಗೆ ಬಲಿಯಾಗದೇ ಇದ್ದಿದ್ದರೆ ಭಾರತ ಅಪರೂಪದ ದಾಖಲೆಗೆ ಪಾತ್ರವಾಗುತ್ತಿತ್ತು,
ಶಿಖರ್ ಧವನ್ ಆತುರದಿಂದ ರನೌಟ್ ಬಲಿಯಾಗದೇ ಇದ್ದಿದ್ದರೆ ಭಾರತ ಪಾಕಿಸ್ತಾನದ ವಿರುದ್ಧ 10 ವಿಕೆಟ್ ಗಳ ಅಂತರದಲ್ಲಿ ಜಯಿಸುತ್ತಿತ್ತು. ಆ ಮೂಲಕ ವಿಕೆಟ್ ನಷ್ಟವಿಲ್ಲದೇ ಪಾಕಿಸ್ತಾನದ ವಿರುದ್ಧ ಜಯ ಇತಿಹಾಸದ ಪುಟ ಸೇರುತ್ತಿತ್ತು. ಕ್ರಿಕೆಟ್ ಇತಿಹಾಸದಲ್ಲಿ ಭಾರತ ಈ ವರೆಗೂ 6 ಬಾರಿ ವಿಕೆಟ್ ನಷ್ಟವಿಲ್ಲದೇ ಜಯ ಗಳಿಸಿದೆ. ಕೊನೆಯ ಬಾರಿಗೆ ಭಾರತ 2016ರಲ್ಲಿ ಜಿಂಬಾಂಬ್ವೆ ವಿರುದ್ಧ ಹರಾರೆಯಲ್ಲಿ ಜಯಿಸಿತ್ತು. ಕ್ರಿಕೆಟ್ ಇತಿಹಾಸದಲ್ಲಿ ವಿಕೆಟ್ ನಷ್ಟವಿಲ್ಲದೇ ಜಯ ಗಳಿಸಿದ ಮೊಟ್ಟ ಮೊದಲ ತಂಡ ಕೂಡ ಭಾರತವೇ... 1975ರಲ್ಲಿ ಭಾರತ ತಂಡ ಈಸ್ಟ್ ಆಫ್ರಿಕಾ ವಿರುದ್ಧ ಮೊಟ್ಟ ಮೊದಲ ಬಾರಿಗೆ 10 ವಿಕೆಟ್ ಗಳ ಅಂತರದಲ್ಲಿ ಜಯಿಸಿತ್ತು. ಆ ಬಳಿಕ 1981ರಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ಮೆಲ್ಬೋರ್ನ್ ನಲ್ಲಿ ಜಯಿಸಿತ್ತು.
ಪಾಕಿಸ್ತಾನ ಕೂಡ 1986ರಲ್ಲಿ ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್ ಗಳ ಅಂತರದಲ್ಲಿ ಜಯಿಸಿದೆ. 
ಇನ್ನು 10 ವಿಕೆಟ್ ಗಳ ಅಂತರದಲ್ಲಿ ಅತೀ ಹೆಚ್ಚು ಬಾರಿ ಗೆದ್ದ ತಂಡಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡ ಅಗ್ರ ಸ್ಥಾನಿಯಾಗಿದ್ದು, ವಿಂಡೀಸ್ ತಂಡ 10 ಬಾರಿ 10 ವಿಕೆಟ್ ಗಳ ಅಂತರದಲ್ಲಿ ಜಯಿಸಿದೆ. 2ನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಇದ್ದು, ಕಿವೀಸ್ ಪಡೆ 8 ಬಾರಿ ಈ ರೀತಿ ಜಯಿಸಿದೆ. ಉಳಿದಂತೆ ದಕ್ಷಿಣ ಆಫ್ರಿಕಾ (7 ಬಾರಿ), ಭಾರತ (6 ಬಾರಿ), ಇಂಗ್ಲೆಂಡ್ (6 ಬಾರಿ), ಶ್ರೀಲಂಕಾ (6 ಬಾರಿ), ಪಾಕಿಸ್ತಾನ (4 ಬಾರಿ), ಆಸ್ಟ್ರೇಲಿಯಾ (4 ಬಾರಿ) ಈ ಸಾಧನೆ ಮಾಡಿದೆ. ಇನ್ನು ಕ್ರಿಕೆಟ್ ಶಿಶು ಕೀನ್ಯಾ ಮತ್ತು ಆಫ್ಘಾನಿಸ್ತಾನ ಈ ಸಾಧನೆ ಮಾಡಿದ್ದು, 2007ರಲ್ಲಿ ಬರ್ಮುಡಾ ವಿರುದ್ಧ ಕೀನ್ಯಾ ಈ ಸಾಧನೆ ಮಾಡಿದ್ದರೆ, ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಛಾಪು ಮೂಡಿಸುತ್ತಿರುವ ಆಫ್ಘಾನಿಸ್ತಾನ 2018ರಲ್ಲಿ ಜಿಂಬಾಂಬ್ವೆ ವಿರುದ್ಧ 10 ವಿಕೆಟ್ ಗಳ ಅಂತರದಲ್ಲಿ ಜಯಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com