ರೋಹಿತ್ ಶರ್ಮಾ ಮತ್ತು ಧೋನಿ
ಕ್ರಿಕೆಟ್
ಧೋನಿ ಎವರ್ ಗ್ರೀನ್ ಕ್ಯಾಪ್ಟನ್, ಪರಿಸ್ಥಿತಿ ಎಂತಹುದೇ ಇದ್ದರೂ ಸಲಹೆ ನೀಡಿ ಮುನ್ನಡೆಸುತ್ತಾರೆ: ರೋಹಿತ್ ಶರ್ಮಾ
ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಎವರ್ ಗ್ರೀನ್ ಕ್ಯಾಪ್ಟನ್... ಪರಿಸ್ಥಿತಿ ಎಂತಹುದೇ ಇದ್ದರೂ ಸಲಹೆ ನೀಡಿ ಮುನ್ನಡೆಸುತ್ತಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ದುಬೈ: ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಎವರ್ ಗ್ರೀನ್ ಕ್ಯಾಪ್ಟನ್... ಪರಿಸ್ಥಿತಿ ಎಂತಹುದೇ ಇದ್ದರೂ ಸಲಹೆ ನೀಡಿ ಮುನ್ನಡೆಸುತ್ತಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಶುಕ್ರವಾರ ದುಬೈನಲ್ಲಿ ಏಷ್ಯಾಕಪ್ 2018ರ ಟೂರ್ನಿಯ ಫೈನಲ್ ಪಂದ್ಯದ ರೋಚಕ ಗೆಲುವಿನ ಬಳಿಕ ಮಾತನಾಡಿದ ರೋಹಿತ್ ಶರ್ಮಾ ಟೂರ್ನಿಯುದ್ದಕ್ಕೂ ಮಹೇಂದ್ರ ಸಿಂಗ್ ಧೋನಿ ಅವರ ಕೊಡುಗೆಯನ್ನು ನೆನೆದರು. ಈ ವೇಳೆ ತಂಡದ ಯಶಸ್ಸಿನಲ್ಲಿ ಧೋನಿ ಪಾತ್ರವನ್ನು ಶ್ಲಾಘಿಸಿದ ರೋಹಿತ್ ಶರ್ಮಾ, ನಿಜಕ್ಕೂ ಧೋನಿ ಎವರ್ ಗ್ರೀನ್ ನಾಯಕ.. ಅವರ ನಾಯಕತ್ವದಲ್ಲಿ ನಾನು ಸಾಕಷ್ಟು ವರ್ಷ ಆಡಿದ್ದೇನೆ. ಸಾಕಷ್ಚು ವರ್ಷಗಳಿಂದ ಅವರ ನಾಯಕತ್ವವನ್ನು ನೋಡಿದ್ದೇನೆ. ನಿಜಕ್ಕೂ ಅವರು ಸ್ಪೂರ್ತಿದಾಯಕ ಆಟಗಾರ. ಇಡೀ ಟೂರ್ನಿಯಲ್ಲಿ ತಂಡಕ್ಕೆ ಅವರ ಪಾತ್ರ ಅತ್ಯಂತ ದೊಡ್ಡದು. ಧೋನಿ ಎಂತಹುದೇ ಪರಿಸ್ಥಿತಿ ಇದ್ದರೂ ಸೂಕ್ತ ಸಲಹೆ ನೀಡಿ ನಮ್ಮ ಮೇಲಿನ ಒತ್ತಡ ಕಡಿಮೆ ಮಾಡುತ್ತಿದ್ದರು. ನಿರ್ಧಾರ ಕೈಗೊಳ್ಳುವಾಗ ಅವರು ಒತ್ತಡಕ್ಕೆ ಒಳಗಾಗುವುದಿಲ್ಲ ಮತ್ತು ಸಾಕಷ್ಚು ಯೋಚಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇದೇ ವೇಳೆ ಪೈನಲ್ ಪಂದ್ಯದ ಗೆಲುವಿನ ಕುರಿತು ಮಾತನಾಡಿದ ರೋಹಿತ್, ಸತತ ಮೂರನೇ ಬಾರಿಗೆ ಏಷ್ಯಾ ಕಪ್ ಗೆದ್ದಿರುವುದು ಸಂತಸ ತಂದಿದೆ. ಆದರೆ ಇದು ಇಡೀ ತಂಡದ ಪರಿಶ್ರಮಕ್ಕೆ ಸಂದ ಫಲ. ತಂಡದ ಪ್ರತೀಯೊಬ್ಬ ಸದಸ್ಯನಿಗೂ ಗೆಲುವಿನ ಶ್ರೇಯ ಸಲ್ಲಬೇಕು. ಅಂತೆಯೇ ಬಾಂಗ್ಲಾದೇಶ ಕೂಡ ಅತ್ಯುತ್ತಮ ಹೋರಾಟ ನೀಡಿತು. ತಮ್ಮ ಅದ್ಬುತ ಪ್ರದರ್ಶನದ ಮೂಲಕ ಅವರನ್ನು ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದರು. ಚೆಂಡು ಹಳೆಯದಾದಷ್ಟು ಸ್ಪಿನ್ನರ್ ಗಳಿಗೆ ಚೆಂಡು ನೆರವಾಗುತ್ತದೆ ಎಂದು ಭಾವಿಸಿದ್ದೆವು. ಈ ನಿಟ್ಟಿನಲ್ಲಿ ನಾವು ಯಶಸ್ಸು ಕೂಡ ಆದೆವು. ತಂಡದ ಎಲ್ಲ ಸದಸ್ಯರೂ ಜವಾಬ್ದಾರಿ ಅರಿತು ಆಡಿದರು. ಅಂತೆಯೇ ಫೈನಲ್ ಪಂದ್ಯದ ನಮ್ಮ ಯಶಸ್ಸಿನಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ನಮ್ಮ ಬೆಂಬಲಿಗರಿಗೂ ಯಶಸ್ಸಿನ ಶ್ರೇಯ ಸಲ್ಲಬೇಕು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮೈದಾನದಲ್ಲಿ ಕಿಕ್ಕಿರಿದು ತುಂಬಿ ತಂಡವನ್ನು ಬೆಂಬಲಿಸಿದರು. ಟೂರ್ನಿಯ ಅರಂಭದ ಪಂದ್ಯದಿಂದ ಫೈನಲ್ ಪಂದ್ಯದವರೆಗೂ ಅವರು ಬೆಂಬಲಿಸಿದ ರೀತಿ ಶ್ಲಾಘನೀಯ ಎಂದು ರೋಹಿತ್ ಶರ್ಮಾ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ