ಗೆಲುವಿನ ಸಂಭ್ರಮದಲ್ಲಿ ಡೆಲ್ಲಿ ತಂಡ
ಕ್ರಿಕೆಟ್
ಐಪಿಎಲ್ 2019: ಹೈದರಾಬಾದ್ ವಿರುದ್ಧ ಡೆಲ್ಲಿಗೆ 39 ರನ್ ಗಳ ಭರ್ಜರಿ ಜಯ
ಡೇವಿಡ್ ವಾರ್ನರ್ ಅವರ ಆಕರ್ಷಕ ಅರ್ಧಶತಕ ಹಾಗೂ ಜಾನಿ ಬೇರ್ ಸ್ಟೋವ್ ಹೋರಾಟದ ನಡುವೆಯೂ ಸನ್ ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 39 ರನ್ ಗಳ ಸೋಲುಕಂಡಿದೆ.
ಹೈದರಾಬಾದ್: ಡೇವಿಡ್ ವಾರ್ನರ್ ಅವರ ಆಕರ್ಷಕ ಅರ್ಧಶತಕ ಹಾಗೂ ಜಾನಿ ಬೇರ್ ಸ್ಟೋವ್ ಹೋರಾಟದ ನಡುವೆಯೂ ಸನ್ ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 39 ರನ್ ಗಳ ಸೋಲುಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಪೇರಿಸಿತು. ಆರಂಭಿಕರ ವೈಫಲ್ಯದ ನಡುವೆಯೂ ಮಧ್ಯಮ ಕ್ರಮಾಂಕಲ್ಲಿ ಕೊಲಿನ್ ಮುನ್ಪೋ (40 ರನ್) ಹಾಗೂ ಶ್ರೇಯಸ್ ಅಯ್ಯರ್ (45 ರನ್) ಅವರ ಸಮಯೋಚಿತ ಆಟದ ನೆರವಿನಿಂದ ಡೆಲ್ಲಿ ತಂಡ ಹೈಜರಾಬಾದ್ ಸವಾಲಿನ ಗುರಿ ನೀಡಿತು.
ಈ ಮೊತ್ತವನ್ನು ಬೆನ್ನು ಹತ್ತಿದ ಹೈದರಾಬಾದ್ ತಂಡ ಡೇವಿಡಾ ವಾರ್ನರ್ ಅವರ ಅರ್ಧಶತಕ ಹಾಗೂ ಜಾನ್ ಬೇರ್ ಸ್ಟೋವ್ ಅವರ ಅಮೋಘ 41 ರನ್ ಗಳ ನೆರವಿನಿಂದ ಭರ್ಜರಿ ಆರಂಭ ಪಡೆದು ಗೆಲುವು ಸಾಧಿಸುವ ಉತ್ಸಾಹ ತೋರಿತ್ತು. ಆದರೆ 10ನೇ ಓವರ್ ನಲ್ಲಿ 41 ರನ್ ಗಳಿಸಿ ಅರ್ಧಶತಕದತ್ತ ಧಾವಿಸುತ್ತಿದ್ದ ಜಾನಿ ಬೇರ್ ಸ್ಟೋವ್ ಕೀಮೋ ಪೌಲ್ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಅಕ್ಷರಶಃ ಹೈದರಾಬಾದ್ ತಂಡದ ಬ್ಯಾಟ್ಸಮನ್ ಗಳು ಪೆವಿಲಿಯನ್ ಪರೇಡ್ ನೆಡೆಸಿದರು.
17ನೇ ಓವರ್ ಹೊತ್ತಿಗೆ 4 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್ ತಂಡಕ್ಕೆ 51 ರನ್ ಗಳಿಸಿದ್ದ ವಾರ್ನರ್ ಆಸರೆಯಾಗಿದ್ದರಾದರೂ ಅವರೂ ಕೂಡ ರಬಾಡಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಕ್ರೀಸ್ ಗೆ ಬಂದ ಯಾವೊಬ್ಬ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ನಿಂತು ಆಡುವ ದೈರ್ಯ ತೋರಲಿಲ್ಲ. ಬಂದ ಎಲ್ಲ ಬ್ಯಾಟ್ಸಮನ್ ಗಳು ಬಂದಷ್ಟೇ ವೇಗವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಹೈದರಾಬಾದ್ ತಂಡ 18.5 ಓವರ್ ನಲ್ಲಿ ಕೇವಲ 116 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 39 ರನ್ ಗಳ ಅಂತರದಲ್ಲಿ ಡೆಲ್ಲಿ ವಿರುದ್ಧ ಮಂಡಿಯೂರಿತು.
ಇನ್ನು ಡೆಲ್ಲಿ ಪರ ಕಾಗಿಸೋ ರಬಾಡಾ 4 ವಿಕೆಟ್ ಪೆಡದು ಹೈದರಾಬಾದ್ ಗೆ ಮರ್ಮಾಘಾತ ನೀಡಿದರೆ, ಕ್ರಿಸ್ ಮೋರಿಸ್ ಮತ್ತು ಕೀಮೋ ಪೌಲ್ ತಲಾ 3 ವಿಕೆಟ್ ಪಡೆದು ಹೈದರಾಬಾದ್ ಪತನಕ್ಕೆ ಕಾರಣರಾದರು.
Fun Fact: @DelhiCapitals are unbeaten in 4 games away from the Feroz Shah Kotla
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ