ನಿನ್ನ ಕ್ರಿಕೆಟ್ ಜೀವನ ಮುಗಿಸಲು ನಿಂತವರ ಮಧ್ಯದ ವಿಕೆಟ್ ಉರುಳಿದೆ: ಗೌತಮ್ ಗಂಭೀರ್ ಕಿಡಿ

ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ನವದೀಪ್ ಸೈನಿ ಅದ್ಭುತ ಬೌಲಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವಿಚಾರವನ್ನೇ ಟ್ವೀಟ್ ಮಾಡಿರುವ ಮಾಜಿ...
ನವದೀಪ್ ಸೈನಿ-ಗೌತಮ್ ಗಂಭೀರ್
ನವದೀಪ್ ಸೈನಿ-ಗೌತಮ್ ಗಂಭೀರ್
Updated on
ನವದೆಹಲಿ: ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ನವದೀಪ್ ಸೈನಿ ಅದ್ಭುತ ಬೌಲಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವಿಚಾರವನ್ನೇ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಚೇತನ್ ಮತ್ತು ಬಿಷನ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ನವದೀಪ್ ಸೈನಿ ಮೂರು ವಿಕೆಟ್ ಪಡೆದಿದ್ದಾರೆ. ಇನ್ನು ಸೈನಿ ಈ ಮಟ್ಟಿನ ಬೆಳವಣಿಗೆಯ ಹಿಂದೆ ಇರುವ ಶಕ್ತಿ ಗಂಭೀರ್ ಎಂಬ ವಿಷಯ ಬಹಿರಂಗಗೊಂಡಿದೆ.
ಈ ಹಿಂದೆ ರಣಜಿ ಕ್ರಿಕೆಟ್ ತಂಡಕ್ಕೆ ನವದೀಪ್ ಸೈನಿಯನ್ನು ಆಯ್ಕೆ ಮಾಡಲು ಗಂಭೀರ್ ಪ್ರಯತ್ನ ಪಟ್ಟಾಗ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಮತ್ತು ಚೇತನ್ ಚೌಹಾಣ್ ವಿರೋಧಿಸಿದ್ದರು. 
ಸದ್ಯ ಸೈನಿ ಪ್ರದರ್ಶನ ಕುರಿತಂತೆ ಗಂಭೀರ್ ಟ್ವೀಟ್ ಮಾಡಿದ್ದಾರೆ. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುತ್ತಿರುವುದಕ್ಕೆ ಸೈನಿಗೆ ಅಭಿನಂದನೆಗಳು. ಸೈನಿ ನೀನು ಮಾಡಿದ ಮೊದಲ ಓವರ್ ನಲ್ಲೇ ಎರಡು ವಿಕೆಟ್ ಪಡೆದಿದ್ದೀಯಾ. ನೀನು ಅಂಗಳಕ್ಕೆ ಇಳಿಯುವ ಮುನ್ನ ನಿನ್ನ ಕ್ರಿಕೆಟ್ ಜೀವನವನ್ನು ಮುಗಿಸಲು ಯೋಚನೆ ಮಾಡಿದ್ದ ಬಿಷನ್ ಸಿಂಗ್ ಬೇಡಿ ಮತ್ತು ಚೇತನ್ ಚೌಹಾಣ್ ರ ಮಧ್ಯದ ವಿಕೆಟ್ ಈಗ ಉರುಳಿ ಬಿದ್ದಿದೆ ಎಂದು ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com