ಪಂತ್ ಆಟಕ್ಕೆ ಮುಖಮುಚ್ಚಿಕೊಂಡ, ಕುಲ್‌ದೀಪ್ ಬೌಲಿಂಗ್‌ಗೆ ಮೈದಾನದಲ್ಲೇ ಕಿಡಿಕಾರಿದ ವಿರಾಟ್, ವಿಡಿಯೋ ವೈರಲ್!

ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿರಬಹುದು. ಆದರೆ ಮೈದಾನದಲ್ಲಿ ಸಹ ಆಟಗಾರರ ಪ್ರದರ್ಶನ ಕಂಡು ವಿರಾಟ್ ಕೊಹ್ಲಿ ಉಗ್ರರೂಪ ತಾಳಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಲದೀಪ್ ಯಾದವ್-ವಿರಾಟ್ ಕೊಹ್ಲಿ
ಕುಲದೀಪ್ ಯಾದವ್-ವಿರಾಟ್ ಕೊಹ್ಲಿ

ಕಟಕ್: ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿರಬಹುದು. ಆದರೆ ಮೈದಾನದಲ್ಲಿ ಸಹ ಆಟಗಾರರ ಪ್ರದರ್ಶನ ಕಂಡು ವಿರಾಟ್ ಕೊಹ್ಲಿ ಉಗ್ರರೂಪ ತಾಳಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಟಕ್ ಮೈದಾನದಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಹಲವು ಸುಲಭ ಕ್ಯಾಚ್ ಗಳನ್ನು ಕೈಚೆಲ್ಲಿದ್ದರು. ಇದೇ ವೇಳೆ ಕುಲದೀಪ್ ಯಾದವ್ ಸಹ ತಮ್ಮ ಬೌಲಿಂಗ್ ನಲ್ಲಿ ಸಿಕ್ಸರ್ ಗಳನ್ನು ಹೊಡೆಸಿಕೊಂಡಿದ್ದಕ್ಕೆ ಆಕ್ರೋಶಗೊಂಡ ಕೊಹ್ಲಿ ಮೈದಾನದಲ್ಲೇ ಕುಲ್ದೀಪ್ ವಿರುದ್ಧ ತಮ್ಮ ಸಿಟ್ಟನ್ನು ಹೊರಹಾಕಿದರು. 

ಕುಲದೀಪ್ ಬೌಲಿಂಗ್ ನಲ್ಲಿ ಪೊಲಾರ್ಡ್ ಸಿಕ್ಸರ್ ಬಾರಿಸಿದ್ದರು. ನಂತರ ಪೊಲಾರ್ಡ್ ಸಿಂಗಲ್ ತೆಗೆದುಕೊಂಡರು. ಈ ವೇಳೆ ಸ್ಟ್ರೈಕ್ ಗೆ ಬಂದ ಪೂರನ್ ಸಹ ಸಿಕ್ಸರ್ ಬಾರಿಸಿದ್ದು ಇದರಿಂದ ಆಕ್ರೋಶಗೊಂಡ ಕೊಹ್ಲಿ ನೀನು ಏನ್ ಬೌಲಿಂಗ್ ಮಾಡುತ್ತಿದ್ದೀಯಾ ಎಂದು ಸಿಟ್ಟನ್ನು ಹೊರಹಾಕಿದರು. 
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com