ಮತ್ತೆ ನೆನಪಾದ ಫಿಲಿಪ್ ಹ್ಯೂಸ್; ಆಸಿಸ್ ವೇಗಿ ಬೌನ್ಸರ್ ಗೆ ಆಸ್ಪತ್ರೆ ಪಾಲಾದ ಲಂಕಾ ಬ್ಯಾಟ್ಸಮನ್

ಫಿಲಿಪ್ ಹ್ಯೂಸ್ ಪ್ರಕರಣವನ್ನು ನೆನಪಿಸುವ ಘಟನೆಯೊಂದು ಶ್ರೀಲಂಕಾ-ಆಸ್ಟ್ರೇಲಿಯಾ ಟೆಸ್ಟ್ ವೇಳೆ ನಡೆದಿದೆ.
ಮತ್ತೆ ನೆನಪಾದ ಫಿಲಿಪ್ ಹ್ಯೂಸ್; ಆಸಿಸ್ ವೇಗಿ ಬೌನ್ಸರ್ ಗೆ ಆಸ್ಪತ್ರೆ ಪಾಲಾದ ಲಂಕಾ ಬ್ಯಾಟ್ಸಮನ್
ಮತ್ತೆ ನೆನಪಾದ ಫಿಲಿಪ್ ಹ್ಯೂಸ್; ಆಸಿಸ್ ವೇಗಿ ಬೌನ್ಸರ್ ಗೆ ಆಸ್ಪತ್ರೆ ಪಾಲಾದ ಲಂಕಾ ಬ್ಯಾಟ್ಸಮನ್
Updated on: 
ಬೆಂಗಳೂರು: ಫಿಲಿಪ್ ಹ್ಯೂಸ್ ಪ್ರಕರಣವನ್ನು ನೆನಪಿಸುವ ಘಟನೆಯೊಂದು ಶ್ರೀಲಂಕಾ-ಆಸ್ಟ್ರೇಲಿಯಾ ಟೆಸ್ಟ್ ವೇಳೆ ನಡೆದಿದೆ. 
ಅನುಭವಿ ಆರಂಭಿಕ ಬ್ಯಾಟ್ಸ್ಮನ್ ದಿಮುಥ್ ಕರುಣರತ್ನೆ ಆಸ್ಟ್ರೇಲಿಯಾ ಬೌಲರ್ ಪ್ಯಾಟ್ ಕಮ್ಮಿನ್ಸ್ ಬೌನ್ಸರ್ ಎಸೆತಕ್ಕೆ ಗುರಿಯಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ.  58 ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕರುಣರತ್ನೆ, 46 ರನ್ ಗಳಿಸಿ ಆಡುತ್ತಿದ್ದರು. ಈ ವೇಳೆ ಪ್ಯಾಟ್ ಕಮ್ಮಿನ್ಸ್ ಬೌನ್ಸರ್ ಎಸೆದಿದ್ದಾರೆ,  ವೇಗವಾಗಿ ಬಂದ ಚೆಂಡು ಕುತ್ತಿಗೆ ಭಾಗಕ್ಕೆ ತಗುಲಿದ್ದು ಕರುಣರತ್ನೆ ಅಲ್ಲೇ ಕುಸಿದುಬಿದ್ದಿದ್ದಾರೆ. 
ಕ್ರೀಸ್ ನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತಾದರೂ 10 ನಿಮಿಷಗಳ ಬಳಿಕ ಅವರನ್ನು ಸ್ಟ್ರೆಚರ್ ನಲ್ಲಿ ಕರೆದೊಯ್ಯಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com