ಡೈನ್ ಬ್ರಾವೋ-ವಿರಾಟ್ ಕೊಹ್ಲಿ-ಎಂಎಸ್ ಧೋನಿ
ಕ್ರಿಕೆಟ್
ಕಿಕ್ ಕೊಡುತ್ತೆ ಡ್ವೇನ್ ಬ್ರಾವೋ ಹೊಸ ಹಾಡು 'ಏಷ್ಯಾ'; ಕೊಹ್ಲಿ, ಧೋನಿ ಬಗ್ಗೆ ಗುಣಗಾನ!
ವೆಸ್ಟ್ ಇಂಡೀಸ್ ತಂಡದ ಆಟಗಾರ ಡ್ವೇನ್ ಬ್ರಾವೋ ಅವರು ಸಖತ್ ಆಗಿ ಹಾಡುತ್ತಾರೆ. ಹೌದು ಅವರು ಏಷ್ಯಾ ಕ್ರಿಕೆಟ್ ಆಟಗಾರರ ಮೇಲೆ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.
ಮುಂಬೈ: ವೆಸ್ಟ್ ಇಂಡೀಸ್ ತಂಡದ ಆಟಗಾರ ಡ್ವೇನ್ ಬ್ರಾವೋ ಅವರು ಸಖತ್ ಆಗಿ ಹಾಡುತ್ತಾರೆ. ಹೌದು ಅವರು ಏಷ್ಯಾ ಕ್ರಿಕೆಟ್ ಆಟಗಾರರ ಮೇಲೆ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.
ಏಷ್ಯಾದಲ್ಲಿ ಕ್ರಿಕೆಟ್ ಆಡುವ ಪ್ರಮುಖ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ಹಾಗೂ ಈ ರಾಷ್ಟ್ರಗಳ ಆಟಗಾರರ ಹೆಸರನ್ನು ವಿಡಿಯೋದಲ್ಲಿ ಆಡಿದ್ದಾರೆ. ಈ ಹಾಡಿನ ವಿಡಿಯೋವನ್ನು ಪಾಕಿಸ್ತಾನದ ಮಾಜಿ ಆಟಗಾರ ಶಾಯೀದ್ ಆಫ್ರಿದಿ ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಹಾಡಿನಲ್ಲಿ ಟೀಂ ಇಂಡಿಯಾದ ಕೊಹ್ಲಿ, ಎಂಎಸ್ ಧೋನಿ, ಶ್ರೀಲಂಕಾದ ಕುಮಾರ್ ಸಂಗಕ್ಕಾರ, ಮಹೇಲಾ ಜಯವರ್ಧನೆ, ಬಾಂಗ್ಲಾದ ಶಕೀಬ್, ಪಾಕಿಸ್ತಾನದ ಆಫ್ರಿದಿ ಹಾಗೂ ಆಫ್ಗಾನಿಸ್ತಾನದ ರಶೀದ್ ಖಾನ್ ಕುರಿತಂತೆ ಆಡಿದ್ದಾರೆ.
Well @DJBravo47, this is definitely an improvement on the ‘Champion’ song, especially since you’ve included me in the lineup
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ