ಭಾರತ-ಆಸ್ಟ್ರೇಲಿಯಾ ಸರಣಿ: ಹಾರ್ದಿಕ್ ಪಾಂಡ್ಯ ಅಲಭ್ಯ, ರವೀಂದ್ರ ಜಡೇಜಾ ಇನ್!

ಮುಂಬರುವ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಏಕದಿನ ಸರಣಿಗೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದಾರೆ.
ಭಾರತ-ಆಸ್ಟ್ರೇಲಿಯಾ ಸರಣಿ: ಹಾರ್ದಿಕ್ ಪಾಂಡ್ಯ ಅಲಭ್ಯ, ರವೀಂದ್ರ ಜಡೇಜಾ ಇನ್!
ಭಾರತ-ಆಸ್ಟ್ರೇಲಿಯಾ ಸರಣಿ: ಹಾರ್ದಿಕ್ ಪಾಂಡ್ಯ ಅಲಭ್ಯ, ರವೀಂದ್ರ ಜಡೇಜಾ ಇನ್!
Updated on: 
ನವದೆಹಲಿ: ಮುಂಬರುವ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಏಕದಿನ ಸರಣಿಗೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದಾರೆ. 

ಬೆನ್ನಿನ ಸಮಸ್ಯೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯ ಬದಲಿಗೆ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದು, ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಆಲ್ ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಅಲಭ್ಯತೆ ತಂಡಕ್ಕೆ ಸ್ವಲ್ಪ ಮಟ್ಟಿಗೆ ಕಾಡಲಿದೆ. 

ಹಾರ್ದಿಕ್ ಪಾಂಡ್ಯ ಬೆನ್ನಿನ ಸಮಸ್ಯೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಬಿಸಿಸಿಐ ವೈದ್ಯಕೀಯ ತಂಡ ಸಲಹೆ ನೀಡಿದೆ. ಬೆನ್ನಿನ ಸದೃಢತೆಯ ಥೆರೆಪಿ ಮುಂದಿನ ವಾರದಿಂದ ಪ್ರಾರಂಭವಾಗಲಿದೆ ಎಂದು ಬಿಸಿಸಿಐ ಹೇಳಿದೆ. 

ಶನಿವಾರ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20- ಏಕದಿನ ಸರಣಿ ಪ್ರಾರಂಭವಾಗಲಿದ್ದು, ಬೆಂಗಳೂರಿನಲ್ಲಿ ಫೆ.27 ರಂದು ಪಂದ್ಯ ನಡೆಯಲಿದೆ. ಏಕದಿನ ಪಂದ್ಯ ಮಾರ್ಚ್.2 ರಂದು ಹೈದರಾಬಾದ್ ನಲ್ಲಿ, ಮಾರ್ಚ್.5 ರಂದು ನಾಗ್ಪುರದಲ್ಲಿ, ಮಾರ್ಚ್ 8 ರಂದು ರಾಂಚಿಯಲ್ಲಿ, ಮಾ.10 ರಂದು ಮೊಹಾಲಿಯಲ್ಲಿ ಹಾಗೂ ಮಾ.13 ರಂದು ದೆಹಲಿಯಲ್ಲಿ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com