ಅಂಪೈರ್ ತಪ್ಪು ತೀರ್ಪಿನಿಂದ ಧೋನಿ ಔಟಾದ್ರು, ಡಿಆರ್‌ಎಸ್‌ 'ಕಿಂಗ್'ಗೆ ಸಿಗಲಿಲ್ಲ ಡಿಆರ್‌ಎಸ್‌ ಅವಕಾಶ!

ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದರೂ ಈಗ ಧೋನಿ ಔಟ್ ಎಂದು ನೀಡಿದ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ಎಂಎಸ್ ಧೋನಿ
ಎಂಎಸ್ ಧೋನಿ
ಸಿಡ್ನಿ: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದರೂ ಈಗ ಧೋನಿ ಔಟ್ ಎಂದು ನೀಡಿದ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. 
ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಎಂಎಸ್ ಧೋನಿ 51 ರನ್ ಗಳಿಸಿದ್ದಾಗ ಬೆಹೆಂಡ್ರೋರ್ಫ್ ಎಸೆತದಲ್ಲಿ ಎಲ್ಬಿಯಾದರು. ಕೂಡಲೇ ಬೌಲರ್ ಎಲ್ಬಿ ಔಟ್ ಗೆ ಮನವಿ ಸಲ್ಲಿಸಿದರು. ಆಗ ಮೈದಾನದಲ್ಲಿದ್ದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಅದಾಗಲೇ ಅಂಬಟ್ಟಿ ರಾಯುಡು ಡಿಆರ್‌ಎಸ್‌ ತೆಗೆದುಕೊಂಡಿದ್ದರಿಂದ ಧೋನಿಗೆ ಡಿಆರ್‌ಎಸ್‌ ತೆಗೆದುಕೊಳ್ಳುವ ಅವಕಾಶವಿರಲಿಲ್ಲ. ಹೀಗಾಗಿ ಧೋನಿ ಪೆಲಿವಿಯನ್ ಕಡೆಗೆ ಹೆಜ್ಜೆ ಹಾಕಿದರು. ಆದರೆ ವಿಡಿಯೋ ರಿಪ್ಲೇಯಲ್ಲಿ ನಾಟೌಟ್ ಆಗಿರುವುದು ಸ್ಪಷ್ಟವಾಗಿತ್ತು. ಆದರೆ ಸಮಯ ಮೀರಿತ್ತು.
ಇನ್ನು ಧೋನಿ ಔಟ್ ಕುರಿತಂತೆ ಧೋನಿ ಔಟ್ ಆಗದೇ ಇದ್ದರೆ ಅವರು ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರು. ಔಟ್ ನೀಡಿದ ಪರಿಣಾಮ ತಂಡಕ್ಕೆ ಭಾರೀ ಹಿನ್ನಡೆ ಆಯಿತು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಧೋನಿ ನಿಧಾನಗತಿಯ ಆಟದಿಂದಲೇ ಟೀಂ ಇಂಡಿಯಾಗೆ ಸೋಲಾಗಿದೆ ಎಂದು ವಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com